×
Ad

ಡಾನ್ಸ್ ಬಾರ್‌ ಗಳು ಮಹಾರಾಷ್ಟ್ರದ ಸಂಸ್ಕೃತಿಯಲ್ಲ: ಕ್ಯಾಂಟೀನ್ ಮಾಲಕನನ್ನು ಥಳಿಸಿದ ಶಿವಸೇನಾ ಶಾಸಕನಿಂದ ವಿವಾದಾತ್ಮಕ ಸಮರ್ಥನೆ

Update: 2025-07-10 18:07 IST

PC : indiatoday.in

ಮುಂಬೈ: ಇಲ್ಲಿನ ಶಾಸಕರ ಕ್ಯಾಂಟೀನ್‌ ನಲ್ಲಿ ತಂಗಳು ಆಹಾರವನ್ನು ವಿತರಿಸಲಾಗಿದೆ ಎಂದು ಆರೋಪಿಸಿ, ಕ್ಯಾಂಟೀನ್‌ ನ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್, "ಡಾನ್ಸ್ ಬಾರ್‌ ಗಳು, ಮಹಿಳೆಯರ ಬಾರ್‌ ಗಳತ್ತ ಒಮ್ಮೆ ನೋಡಿ. ಬಹುತೇಕ ಬಾರ್‌ ಗಳ ಮಾಲಕತ್ವವನ್ನು ಶೆಟ್ಟಿಗಳು ಹೊಂದಿದ್ದಾರೆ. ಅವರು ಯುವಜನತೆಯ ಮೇಲೆ ತುಂಬಾ ಕೆಟ್ಟ ಪ್ರಭಾವ ಬೀರುತ್ತಿದ್ದು, ಮಹಾರಾಷ್ಟ್ರದ ಸಂಸ್ಕೃತಿಯನ್ನು ನಾಶಗೊಳಿಸುತ್ತಿದ್ದಾರೆ" ಎಂದು ಗುರುವಾರ ಆರೋಪಿಸಿದ್ದಾರೆ.

"ನಮ್ಮ ಸಂಸ್ಕೃತಿಯಲ್ಲಿ ಡಾನ್ಸ್ ಬಾರ್‌ ಗಳಿಗೆ ಅವಕಾಶವಿಲ್ಲ. ನಮ್ಮ ನಾಯಕರಾದ ಬಾಳಾಸಾಹೇಬ್ ಠಾಕ್ರೆ, ರಾಜ್ ಠಾಕ್ರೆ ಹಾಗೂ ಏಕನಾಥ್ ಶಿಂದೆಯವರು ಅವನ್ನು ವಿರೋಧಿಸಿದ್ದರು" ಎಂದೂ ಅವರು ಪ್ರತಿಪಾದಿಸಿದ್ದಾರೆ.

ವಸತಿ ನಿಲಯದ ಕ್ಯಾಂಟೀನ್ ಒಂದರ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿ, ಆತನಿಗೆ ಗುದ್ದಿದ್ದ ಬುಲ್ದಾನಾ ಕ್ಷೇತ್ರದ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ಪಕ್ಷದೊಳಗೇ ಆಕ್ರೋಶ ವ್ಯಕ್ತವಾದ ಬೆನ್ನಿಗೇ, ಪ್ರಾದೇಶಿಕ ಭಾವನೆಗಳನ್ನು ಕೆರಳಿಸಲು ಅವರು ಈ ಬಗೆಯ ಹೇಳಿಕೆ ನೀಡಿದ್ದಾರೆ ಎಂದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News