×
Ad

ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ ಎಸ್ಎಸ್ಪಿ ಗುರ್ಬಿಂದರ್ ಸಿಂಗ್ ಅಮಾನತು

Update: 2023-11-25 20:44 IST

ಗುರ್ಬಿಂದರ್ ಸಿಂಗ್ | PHOTO: indiatoday.in

ಚಂಡಿಗಢ: ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದ ಭದ್ರತೆಯಲ್ಲಿ ಲೋಪ ಎಸಗಿದ ಪ್ರಕರಣದಲ್ಲಿ ಬಥಿಂಡಾದ ಹಿರಿಯ ಪೊಲೀಸ್ ಅಧೀಕ್ಷಕ (SSP) ಗುರ್ಬಿಂದರ್ ಸಿಂಗ್ ಅವರನ್ನು ಶನಿವಾರ ಸೇವೆಯಿಂದ ಅಮಾನತು ಮಾಡಲಾಗಿದೆ.

ಈ ಘಟನೆ 5 ಜನವರಿ 2022ರಲ್ಲಿ ನಡೆದಿತ್ತು. ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದುದರಿಂದ ಪಂಜಾಬಿನ ಫ್ಲೈಓವರ್ ಒಂದರಲ್ಲಿ ಪ್ರಧಾನಿ ಅವರ ಬೆಂಗಾವಲು ವಾಹನಗಳು ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿತ್ತು. ಪ್ರಧಾನಿ ಮೋದಿ ಅವರು ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಲು ಫಿರೋಝ್ಪುರದ ಹುಸೈನಿವಾಲಾದತ್ತ ತೆರಳುತ್ತಿದ್ದರು.

ಫ್ಲೈ ಓವರ್ನಲ್ಲಿ ಪ್ರಧಾನಿ ಅವರ ಬೆಂಗಾವಲು ವಾಹನಗಳು ಸಿಲುಕಿದ ಚಿತ್ರದಲ್ಲಿ ಖಾಸಗಿ ವಾಹನವೊಂದು ಬೆಂಗಾವಲು ವಾಹನಗಳನ್ನು ಸಮೀಪಿಸುತ್ತಿರುವುದು ಕಂಡು ಬಂದಿತ್ತು. ಆದುದರಿಂದ ಇದು ಪ್ರಮುಖ ಭದ್ರತಾ ಲೋಪವಾಗಿತ್ತು. ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸದಂತೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಪಂಜಾಬ್ ಸರಕಾರ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಥಿಂಡಾಕ್ಕೆ ಎಎಸ್ಎಸ್ಪಿಯಾಗಿ ನಿಯೋಜನೆಯಾಗಿದ್ದ ಗುರ್ಬಿಂದರ್ ಸಿಂಗ್ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಗೃಹ ಸಚಿವಾಲಯ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News