×
Ad

ಬಿಜೆಪಿ ನಾಯಕ ಶಹನವಾಝ್ ಹುಸೈನ್‌ವಿರುದ್ಧದ ಸಮನ್ಸ್‌ಗೆ ತಡೆ

Update: 2023-10-18 20:18 IST

Photo: Facebook//SyedShahnawazHussain

ಹೊಸದಿಲ್ಲಿ: ಅತ್ಯಾಚಾರ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಿಸಿ ಮಹಿಳೆಯೋರ್ವರು ಸಲ್ಲಿಸಿದ ದೂರಿನ ಆಧಾರದಲ್ಲಿ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಿಜೆಪಿ ನಾಯಕ ಸೈಯದ್ ಶಹನವಾಝ್ ಹುಸೈನ್ ಅವರಿಗೆ ನೀಡಿದ ಸಮನ್ಸ್‌ಗೆ ವಿಶೇಷ ನ್ಯಾಯಾಲಯ ತಡೆ ನೀಡಿದೆ.

ಅಕ್ಟೋಬರ್ 20ರಂದು ತನ್ನ ಮುಂದೆ ಹಾಜರಾಗುವಂತೆ ನಿರ್ದೇಶಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ಹುಸೈನ್ ಅವರು ಸಲ್ಲಿಸಿದ ಮರು ಪರಿಶೀಲನಾ ಅರ್ಜಿಯ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರು ಈ ಆದೇಶ ನೀಡಿದರು.

ಅಕ್ಟೋಬರ್ 17ರಂದು ನೀಡಿದ ಆದೇಶದಲ್ಲಿ ನ್ಯಾಯಾಧೀಶರು ದೂರುದಾರೆಗೆ ನೋಟಿಸು ಕೂಡ ಜಾರಿಗೊಳಿಸಿದ್ದಾರೆ ಹಾಗೂ ನವೆಂಬರ್ 8ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ.

ಅರ್ಜಿದಾರರನ್ನು ಪ್ರತಿನಿಧಿಸಿದ ನ್ಯಾಯವಾದಿಯ ಪ್ರತಿಪಾದನೆ ಹಿನ್ನೆಲೆಯಲ್ಲಿ ಪ್ರಕರಣದ ತೀರ್ಪು ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News