×
Ad

ಪ್ರಕರಣಗಳನ್ನು ಒಂದೆಡೆಗೆ ವರ್ಗಾಯಿಸಲು ಯೋಗ ಗುರು ರಾಮ್‌ದೇವ್ ಸಲ್ಲಿಸಿದ್ದ ಅರ್ಜಿಯನ್ನು ಜುಲೈಗೆ ಮುಂದೂಡಿದ ಸುಪ್ರೀಂಕೋರ್ಟ್

Update: 2024-04-19 22:27 IST

ಗುರು ರಾಮ್‌ದೇವ್ | PC : ANI  

ಹೊಸ ದಿಲ್ಲಿ: ಅಲೋಪತಿ ಚಿಕಿತ್ಸೆ ಕೋವಿಡ್-19 ಅನ್ನು ಗುಣಪಡಿಸುವುದಿಲ್ಲ ಎಂದು ತಾವು ನೀಡಿದ್ದ ಹೇಳಿಕೆಯ ಕುರಿತು ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ FIRಗಳನ್ನು ಒಂದೆಡೆಗೆ ವರ್ಗಾಯಿಸಬೇಕು ಎಂದು ಯೋಗ ಗುರು ರಾಮ್‌ದೇವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈಗೆ ಮುಂದೂಡಿದೆ.

ಇದಕ್ಕೂ ಮುನ್ನ, FIRಗಳು ಹಾಗೂ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಗಳ ವಸ್ತುಸ್ಥಿತಿ ಕುರಿತು ಮಾಹಿತಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶವನ್ನು ಬಿಹಾರ ಮತ್ತು ಛತ್ತೀಸ್‌ಗಢ ರಾಜ್ಯಗಳಿಗೆ ನ್ಯಾ.ಎಂ.ಎಂ.ಸುಂದ್ರೇಶ್ ಹಾಗೂ ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News