×
Ad

“ಎಲ್ಲಾ ಮಹಿಳೆಯರಿಗೆ ಸಂದ ಜಯ”: ಬಿಲ್ಕಿಸ್‌ ಬಾನುಗೆ ಬೆಂಬಲ ಸೂಚಿಸಿ ಕುಸ್ತಿಪಟು ವಿನೇಶ್‌ ಫೋಗಟ್‌ ಟ್ವೀಟ್‌

Update: 2024-01-11 11:26 IST

ವಿನೇಶ್‌ ಫೋಗಟ್‌ (PTI)

ಹೊಸದಿಲ್ಲಿ: ಬಿಲ್ಕಿಸ್‌ ಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪು “ಎಲ್ಲಾ ಮಹಿಳೆಯರಿಗೆ ಸಂದ ವಿಜಯ” ಎಂದು ಖ್ಯಾತ ಕುಸ್ತಿಪಟು ವಿನೇಶ್‌ ಫೋಗಟ್‌ ಟ್ವೀಟ್‌ ಮೂಲಕ ಹೇಳಿ ಬಿಲ್ಕಿಸ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

“ಬಿಲ್ಕಿಸ್‌ ಜೀ, ಇದು ನಮಗೆ, ಎಲ್ಲಾ ಮಹಿಳೆಯರಿಗೆ ಸಂದ ಜಯ. ನೀವು ದೀರ್ಘ ಹೋರಾಟ ಮಾಡಿದ್ದೀರಿ. ನಿಮ್ಮ ಪಯಣವನ್ನು ನೋಡಿ ನಮಗೆ ಧೈರ್ಯ ಮೂಡುತ್ತದೆ,” ಎಂದು ವಿನೇಶ್‌ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಕಾಮನ್ ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಏಕೈಕ ಭಾರತೀಯ ಕುಸ್ತಿಪಟು ಫೋಗಟ್‌ ಆಗಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಹಲವು ಪದಕ ಗೆದ್ದ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ವಿನೇಶ್‌ ಪಾತ್ರರಾಗಿದ್ಧಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News