×
Ad

ಟಿ20 ವಿಶ್ವಕಪ್ ಗೆಲುವು: ಹೈದರಾಬಾದ್ ನಲ್ಲಿ ಮುಹಮ್ಮದ್ ಸಿರಾಜ್ ಗೆ ಅದ್ದೂರಿ ಸ್ವಾಗತ

Update: 2024-07-06 20:48 IST

 ಮುಹಮ್ಮದ್ ಸಿರಾಜ್ |  PC : PTI 

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ನಲ್ಲಿ ಚಾಂಪಿಯನ್ ಆದ ನಂತರ ಶುಕ್ರವಾರ ತನ್ನ ತವರು ನಗರ ಹೈದರಾಬಾದ್ಗೆ ವಾಪಸಾದ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಗೆ ಅದ್ದೂರಿ ಸ್ವಾಗತ ಸ್ವೀಕರಿಸಿದರು.

ಹೈದರಾಬಾದ್ ನ ಮೆಹದಿಪಟ್ಟಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಕಾರಿನಲ್ಲಿ ಬಂದ ಸಿರಾಜ್ರನ್ನು ಸುತ್ತುವರಿದರು. ತನ್ನ ಕಾರಿನ ಸನ್ರೂಫ್ನಲ್ಲಿ ನಿಂತು ನೆರೆದಿದ್ದ ಅಭಿಮಾನಿಗಳತ್ತ ಸಿರಾಜ್ ಕೈಬೀಸಿದರು.

ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಸಂವಹನ ನಡೆಸಿದ ಸಿರಾಜ್, ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದರು.

ಭಾರತ ವಿಶ್ವಕಪ್ ಗೆಲ್ಲಲು ದೀರ್ಘ ಸಮಯದಿಂದ ಕಾಯುತ್ತಿತ್ತು. ಇದೀಗ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಸಿರಾಜ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News