×
Ad

ತಮಿಳುನಾಡು: ಶಾಸಕ ಸ್ಥಾನಕ್ಕೆ ಸೆಂಗೊಟ್ಟೈಯನ್ ರಾಜೀನಾಮೆ

Update: 2025-11-26 21:36 IST

 ಕೆ.ಎ.ಸೆಂಗೊಟ್ಟೈಯನ್ | Photo Credit : PTI 

ಚೆನ್ನೈ,ನ.26: ಎಐಎಡಿಎಂಕೆಯಿಂದ ಉಚ್ಚಾಟಿತ ಮಾಜಿ ಸಚಿವ ಕೆ.ಎ.ಸೆಂಗೊಟ್ಟೈಯನ್ ಅವರು ಬುಧವಾರ ಗೋಬಿಚೆಟ್ಟಿಪಾಳ್ಯಂ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಒಂಭತ್ತು ಸಲ ಶಾಸಕರಾಗಿದ್ದ ಸೆಂಗೊಟ್ಟೈಯನ್ ಚೆನ್ನೈನ ಸಚಿವಾಲಯದಲ್ಲಿ ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಅವರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಸುದ್ದಿಗಾರರು ಸೆಂಗೊಟ್ಟೈಯನ್ ನಟ ವಿಜಯ ಅವರ ರಾಜಕೀಯ ಪಕ್ಷ ಟಿವಿಕೆಗೆ ಸೇರಲಿದ್ದಾರೆ ಎಂಬ ಊಹಾಪೋಹಗಳನ್ನು ಉಲ್ಲೇಖಿಸಿ ಅವರ ಭವಿಷ್ಯದ ನಡೆಯ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದರು.

ಸೆಂಗೊಟ್ಟೈಯನ್ ಈ ತಿಂಗಳು ರಾಜೀನಾಮೆ ಸಲ್ಲಿಸಿರುವ ಎರಡನೇ ಎಐಎಡಿಎಂಕೆ ಶಾಸಕರಾಗಿದ್ದಾರೆ. ನ.4ರಂದು ಪಿ.ಎಚ್.ಮನೋಜ ಪಾಂಡ್ಯನ್ ಅವರು ಡಿಎಂಕೆಗೆ ಸೇರ್ಪಡೆಗೊಂಡ ಬೆನ್ನಲ್ಲೇ ಅಳಂಗುಳಂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಸೆಂಗೊಟ್ಟೈಯನ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಉಚ್ಚಾಟಿತ ನಾಯಕ ಒ.ಪನ್ನೀರ್ ಸೆಲ್ವಂ ಮತ್ತು ಎಎಂಎಂಕೆ ಸ್ಥಾಪಕ ಟಿ.ಟಿ.ವಿ.ದಿನಕರನ್ ಜೊತೆ ಒಂದೇ ಕಾರಿನಲ್ಲಿ ಪಸುಂಪನ್‌ ಗೆ ಪ್ರಯಾಣಿಸಿದ್ದರು ಮತ್ತು ಅಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿಯೂ ಮಾತನಾಡಿದ್ದರು. ಮರುದಿನವೇ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇ.ಕೆ.ಪಳನಿಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News