×
Ad

ತಮಿಳುನಾಡು | ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ; ಮೂವರು ಮೃತ್ಯು, ಹಲವರಿಗೆ ಗಾಯ

Update: 2025-07-21 21:32 IST

ಸಾಂದರ್ಭಿಕ ಚಿತ್ರ

ಚೆನ್ನೈ, ಜು. 21: ಶಿವಕಾಶಿಯ ನರನಪುರಂ ಸಮೀಪ ಇರುವ ಮರಿಯಮ್ಮಾಳ್ ಪಟಾಕಿ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಭಾರೀ ಸ್ಫೋಟದಿಂದ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಹಾಗೂ ಇತರ ಮೂವರು ಗಾಯಗೊಂಡಿದ್ದಾರೆ.

ಅಂಡಿಯಪುರಂ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಕಾರ್ಮಿಕರು ಪಟಾಕಿ ಉತ್ಪಾದಿಸುವ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭ ಒಂದು ಕೊಠಡಿಯಲ್ಲಿದ್ದ ಪಟಾಕಿಗಳು ಸ್ಫೋಟಗೊಂಡವು ಎಂದು ವರದಿ ತಿಳಿಸಿದೆ.

ಪಟಾಕಿಗಳು ಸ್ಪೋಟಗೊಳ್ಳುವ ಸದ್ದು ನೂರಾರು ಮೀಟರ್‌ಗಳ ವರೆಗೆ ಪ್ರತಿಧ್ವನಿಸಿತು. ಮಾಹಿತಿ ದೊರಕಿದ ಕೂಡಲೇ ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು ಹಾಗೂ ಸ್ಪೋಟದಿಂದ ಉಂಟಾದ ಬೆಂಕಿಯನ್ನು ನಂದಿಸಿದರು ಅದು ಹೇಳಿದೆ.

ಈ ದುರಂತದಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News