ರಾಜಸ್ಥಾನದ ಮೌಂಟ್ ಅಬುನಲ್ಲಿ ಮೈನಸ್ 7 ಡಿಗ್ರಿ ಉಷ್ಣತೆ ದಾಖಲು!
Update: 2026-01-24 21:43 IST
pc : hindustantimes
ಜೈಪುರ, ಜ. 24: ತೀವ್ರ ಶೀತ ಮಾರುತವು ಉತ್ತರ ಮತ್ತು ವಾಯುವ್ಯ ಭಾರತವನ್ನು ವ್ಯಾಪಿಸುತ್ತಿರುವಂತೆಯೇ, ರಾಜಸ್ಥಾನದ ಗಿರಿಧಾಮ ಮೌಂಟ್ ಅಬುನಲ್ಲಿ ಶನಿವಾರ ಅತ್ಯಂತ ಶೀತಲ ವಾತಾವರಣ ನೆಲೆಸಿದೆ. ಕಳೆದ ಕೆಲವು ದಿನಗಳಿಂದ ಉಷ್ಣತೆಯು ತೀವ್ರವಾಗಿ ಕುಸಿಯುತ್ತಿದ್ದು, ಹುಲ್ಲುಗಾವಲನ್ನು ಮಂಜಿನ ಹನಿಗಳು ಆವರಿಸಿವೆ ಹಾಗೂ ಕೆರೆಗಳಲ್ಲಿ ಮಂಜಿನ ದಟ್ಟ ಪದರಗಳು ಸೃಷ್ಟಿಯಾಗಿವೆ.
ಸಾಮಾನ್ಯವಾಗಿ ಬಸಂತ ಪಂಚಮಿ ಬಳಿಕ ಚಳಿ ಕಡಿಮೆಯಾಗುತ್ತದೆ. ಆದರೆ, ಮೌಂಟ್ ಅಬುನಲ್ಲಿ ಈ ಬಾರಿ ವ್ಯತಿರಿಕ್ತ ಪರಿಸ್ಥಿತಿ ನೆಲೆಸಿದ್ದು, ಅಲ್ಲಿ ಥರಗುಟ್ವುವ ಚಳಿ ಎಲರನ್ನೂ ಕಾಡುತ್ತಿದೆ. ಮೌಂಟ್ ಅಬುನಲ್ಲಿ ಶುಕ್ರವಾರ ಉಷ್ಣತೆ ತೀವ್ರವಾಗಿ ಕುಸಿದಿದ್ದು, ಶನಿವಾರ ಈ ಚಳಿಗಾಲದ ಅತ್ಯಂತ ಶೀತಲ ವಾತಾವರಣವಾಗಿ ದಾಖಲಾಯಿತು. ಅಲ್ಲಿನ ಕನಿಷ್ಠ ಉಷ್ಣತೆ ಮೈನಸ್ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.