ಮಹಾರಾಷ್ಟ್ರ | ಮತದಾರರ ಪಟ್ಟಿಯಲ್ಲಿ 'ಥಾನೋಸ್' ಫೋಟೋ !
ವೀಡಿಯೊ ಹಂಚಿಕೊಂಡ ರಾಹುಲ್ ಗಾಂಧಿ
Photo credit: X/@INCKerala
ಮುಂಬೈ: ಮತದಾರರ ಪಟ್ಟಿಯಲ್ಲಿ ಅಕ್ರಮದ ಕುರಿತು ಚರ್ಚೆಯ ನಡುವೆ ಮಾಲೆಗಾಂವ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಮಾರ್ವೆಲ್ ಕಾಮಿಕ್ಸ್‌ನ ಕಾಲ್ಪನಿಕ ಖಳನಾಯಕ 'ಥಾನೋಸ್' ಫೋಟೋ ಕಂಡು ಬಂದಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಭಾರತದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ರಾಜಕಾರಣಿಗಳು ಹೇಳಿಕೆ ನೀಡುತ್ತಿದ್ದರು. ಆದರೆ ಇದೀಗ ಕಾಲ್ಪನಿಕ ಖಳನಾಯಕ 'ಥಾನೋಸ್' ಫೋಟೋ ಅಧಿಕೃತ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಮತದಾರರ ಪಟ್ಟಿಯಲ್ಲಿನ ಲೋಪವನ್ನು ಬಹಿರಂಗಪಡಿಸಿದೆ.
ಮಾಲೆಗಾಂವ್‌ನ ಮಾಜಿ ಶಾಸಕ ಆಸಿಫ್ ಶೇಖ್ ರಶೀದ್ ಅವರು, ನನ್ನ ಕ್ಷೇತ್ರದಲ್ಲಿ 6,000ಕ್ಕೂ ಹೆಚ್ಚು ಮತದಾರರು ಸರಿಯಾದ ವಿಳಾಸಗಳಿಲ್ಲದೆ ನೋಂದಾಯಿಸಿಕೊಂಡಿದ್ದಾರೆ. 3,502 ಮತದಾರರ ಗುರುತಿನ ಚೀಟಿಗಳ ಫೋಟೋ ಬದಲಾಯಿಸಲಾಗಿದೆ. 11,298 ಡಬಲ್ ಮತಗಳನ್ನು ನೋಂದಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಮತದಾರರ ಗುರುತಿನ ಚೀಟಿಯಲ್ಲಿ ಹೆಸರು, ವಯಸ್ಸು ತಪ್ಪಾಗಿ ನೋಂದಣಿ ಮತ್ತು ವಿಳಾಸ ಅಪೂರ್ಣವಾಗಿರುವುದು ಕಂಡು ಬಂದಿದೆ. ಇದರಿಂದಾಗಿ ಇಂತಹ ತಪ್ಪುಗಳು ಅಧಿಕೃತ ಮತದಾರರ ಪಟ್ಟಿಯಲ್ಲಿ ಹೇಗೆ ಸಂಭವಿಸುತ್ತದೆ? ಇಂತಹ ತಪ್ಪು ಅಧಿಕೃತ ಮತರಾದರರ ಪಟ್ಟಿಗೆ ಹೇಗೆ ಸೇರುತ್ತದೆ ಎಂಬ ಪ್ರಶ್ನೆ ಮೂಡಿದೆ.
ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಬಗ್ಗೆ ಟೀಕಿಸಿದ್ದಾರೆ. ಈ ಕುರಿತ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಬಿಜೆಪಿಗೆ ಹೊಸ ಮತದಾರ ಅನ್ಲಾಕ್ ಆಗಿದ್ದಾನೆ” ಎಂದು ವ್ಯಂಗ್ಯವಾಗಿ ಬರೆದಿದ್ದಾರೆ.