×
Ad

ಗೆಲ್ಲುತ್ತಿದ್ದಂತೆ ಬೀದಿ ಬದಿಯ ಮಾಂಸಹಾರಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ನೂತನ ಶಾಸಕ

Update: 2023-12-04 18:24 IST

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 115 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಜನಾದೇಶವನ್ನು ಪಡೆದುಕೊಂಡಿದೆ.

ಈ ನಡುವೆ, ಜೈಪುರದ ಹವಾ ಮಹಲ್ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ಅವರು ಫಲಿತಾಂಶ ಹೊರಬಿದ್ದ ಕೂಡಲೇ ಆ ಪ್ರದೇಶದಲ್ಲಿನ ಎಲ್ಲಾ ಮಾಂಸಾಹಾರ ಫುಡ್ ಸ್ಟಾಲ್‌ಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.

ಬಿಜೆಪಿ ಶಾಸಕ ಅಧಿಕಾರಿಯನ್ನು ಕರೆದು ಸಂಜೆಯೊಳಗೆ ರಸ್ತೆ ಬದಿಯ ಎಲ್ಲಾ ಮಾಂಸಾಹಾರಿ ಅಂಗಡಿಗಳನ್ನು ಬೀದಿಯಿಂದ ಮುಚ್ಚುವಂತೆ ಎಚ್ಚರಿಸಿದ್ದಾರೆ.

“ಮಾಂಸಹಾರಿ ಆಹಾರವನ್ನು ಅನ್ನು ರಸ್ತೆ ಬದಿಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ನೂತನ ಶಾಸಕ, “ಕೂಡಲೇ ರಸ್ತೆ ಬದಿಯ ಎಲ್ಲ ಮಾಂಸಾಹಾರಿ ಅಂಗಡಿಗಳನ್ನು ಮುಚ್ಚಬೇಕು. ಅಧಿಕಾರಿ ಯಾರೆಂಬುದು ನನಗೆ ಮುಖ್ಯವಲ್ಲ, ಸಂಜೆ ನಿಮ್ಮಿಂದ ವರದಿ ತರಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News