50 ಕೋಟಿ ದಾಟಿದ ‘ಜನಧನ’ ಬ್ಯಾಂಕ್ ಖಾತೆಗಳ ಸಂಖ್ಯೆ; ಪ್ರಧಾನಿ ಮೋದಿ ಹರ್ಷ
Update: 2023-08-19 20:07 IST
ನರೇಂದ್ರ ಮೋದಿ , ಜನಧನ ಯೋಜನೆ | Photo: PTI
ಹೊಸದಿಲ್ಲಿ: ‘ಜನಧನ’ ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹರ್ಷ ವ್ಯಕ್ತಪಡಿಸಿದ್ದಾರೆ. ಇವುಗಳಲ್ಲಿ ಅರ್ಧಕ್ಕೂ ಅಧಿಕ ಬ್ಯಾಂಕ್ ಖಾತೆಗಳು ಮಹಿಳೆಯರಿಗೆ ಸೇರಿದೆ ಎಂಬ ವಿಚಾರ ನನಗೆ ಆನಂದ ಉಂಟು ಮಾಡಿದೆ ಎಂದು ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಮಹತ್ವದ ಮೈಲುಗಲ್ಲು ಎಂದು ವ್ಯಾಖ್ಯಾನಿಸಿದ ಮೋದಿ, ಇವುಗಳಲ್ಲಿ ಅರ್ಧಕ್ಕಿಂತ ಅಧಿಕ ಖಾತೆಗಳು ನಮ್ಮ ಮಹಿಳಾ ಶಕ್ತಿಗೆ ಸೇರಿರುವುದು ಸಂತೋಷದ ವಿಚಾರವಾಗಿದೆ. ಶೇ. 67 ಖಾತೆಗಳು ಗ್ರಾಮೀಣ ಹಾಗೂ ಅರೆ ಗ್ರಾಮೀಣ ಪ್ರದೇಶಗಳಲ್ಲಿ ತೆರೆದಿರುವುದರೊಂದಿಗೆ ಆರ್ಥಿಕ ಸೇರ್ಪಡೆಯ ಸೌಲಭ್ಯಗಳು ನಮ್ಮ ದೇಶದ ಪ್ರತಿ ಮೂಲೆಗೂ ತಲುಪಲಿದೆ ಎಂದರು.