×
Ad

ಇದೇ ಪ್ರಥಮ ಬಾರಿಗೆ ಪ್ರಮಾಣ ವಚನ ಸ್ವೀಕಾರ ನಮ್ಮದೇ ಸಂಸತ್ ಭವನದಲ್ಲಿ ಆಗುತ್ತಿದೆ: ಪ್ರಧಾನಿ ಮೋದಿ

Update: 2024-06-24 11:01 IST

ನರೇಂದ್ರ ಮೋದಿ | PTI 

ಹೊಸದಿಲ್ಲಿ: ಇಂದಿನಿಂದ ಪ್ರಾರಂಭವಾಗಿರುವ 18ನೇ ಲೋಕಸಭೆಯ ಪ್ರಥಮ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಇಂದು ನಮ್ಮ ಸಂಸದೀಯ ಪ್ರಜಾತಂತ್ರದ ಪಾಲಿಗೆ ಅದ್ಭುತ ದಿನ. ಸ್ವಾತಂತ್ರ್ಯಾನಂತರ ಇದೇ ಪ್ರಥಮ ಬಾರಿಗೆ ನಮ್ಮದೇ ನೂತನ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದೆ. ಇದಕ್ಕೂ ಮುನ್ನ ಹಳೆಯ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿತ್ತು. ಹೀಗಾಗಿ ಇದು ಮಹತ್ವದ ದಿನ. ನಾನು ಎಲ್ಲ ನೂತನ ಚುನಾಯಿತ ಸಂಸದರಿಗೆ ನನ್ನ ಹೃದಯಪೂರ್ವಕ ಸ್ವಾಗತ ಕೋರುತ್ತೇನೆ. ಅವರಿಗೆ ನನ್ನ ಅಭಿನಂದನೆ ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ" ಎಂದು ಹೇಳಿದರು.

18ನೇ ಲೋಕಸಭೆಯ ಪ್ರಥಮ ಅಧಿವೇಶನದ ಪ್ರಾರಂಭದ ದಿನವಾದ ಇಂದು ಹಂಗಾಮಿ ಸ್ಪೀಕರ್ ಭರ್ತೃಹರಿ ಮಹ್ತಾಬ್ ಅವರು ನೂತನ ಚುನಾಯಿತ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ನಂತರ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News