×
Ad

ಕೋಮು ಸೌಹಾರ್ದ ಕದಡುವವರು ಹಿಂದೂ ಅಲ್ಲ : ಉದ್ಧವ್ ಠಾಕ್ರೆ

Update: 2025-01-25 11:32 IST

ಉದ್ಧವ್ ಠಾಕ್ರೆ (Photo: ANI)

ಮುಂಬೈ: ಕೋಮು ಸೌಹಾರ್ದ ಕದಡುವ ಯಾರು ಕೂಡ ಹಿಂದೂ ಆಗಲು ಸಾಧ್ಯವಿಲ್ಲ ಎಂದು ಶಿವಸೇನೆ (ಯುಬಿಟಿ) ವರಿಷ್ಠ ಉದ್ಧವ್ ಠಾಕ್ರೆ ಹೇಳಿದ್ದಾರೆ.

ತನ್ನ ಪಕ್ಷದ ಹಿಂದುತ್ವ ಶುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ ಪತ್ರದಲ್ಲಿ ಚುನಾವಣೆ ನಡೆಸುವಂತೆ ಅವರು ಸವಾಲು ಹಾಕಿದ್ದಾರೆ.

ಶಿವಸೇನೆಯ ಸ್ಥಾಪಕ ಭಾಳಾ ಠಾಕ್ರೆ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಸಮಾರಂಭದ ಸಂದರ್ಭ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘‘ನಿಮಗೆ ನಾಚಿಕೆ ಇದ್ದರೆ, ಇವಿಎಂ ಅನ್ನು ಬದಗಿರಿಸಿ. ಮತ ಪತ್ರ ಬಳಸಿ ಚುನಾವಣೆ ನಡೆಸಿ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News