×
Ad

ಸಿಯಾಚಿನ್‌ನಲ್ಲಿ ಹಿಮಪಾತ ಮೂವರು ಯೋಧರು ಹುತಾತ್ಮ

Update: 2025-09-09 21:50 IST

PC : PTI 

ಶ್ರೀನಗರ, ಸೆ. 9: ಸಿಯಾಚಿನ್ ಹಿಮಪ್ರದೇಶದಲ್ಲಿದ್ದ ಸೇನಾ ಶಿಬಿರದ ಮೇಲೆ ಮಂಗಳವಾರ ಹಿಮಪಾತ ಸಂಭವಿಸಿದ್ದು, ಮೂವರು ಯೋಧರು ಸಾವನ್ನಪ್ಪಿದ್ದಾರೆ.

ಸಿಯಾಚಿನ್ ಹಿಮಪ್ರದೇಶದಲ್ಲಿದ್ದ ಭಾರತೀಯ ಸೇನಾ ಶಿಬಿರದ ಮೇಲೆ ಮಂಗಳವಾರ ಹಿಮಪಾತ ಸಂಭವಿಸಿತು. ಇದರಿಂದ ಯೋಧರು ಹಿಮದಲ್ಲಿ ಹೂತು ಹೋದರು. ಕೂಡಲೇ ಅವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಯಿತು. ಆದರೆ, ರಕ್ಷಣಾ ತಂಡಕ್ಕೆ ಮೂವರು ಯೋಧರ ಮೃತದೇಹ ಇದುವರೆಗೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಸುಮಾರು 5 ಗಂಟೆಗಳ ಕಾಲ ಹಿಮದ ಅಡಿಯಲ್ಲಿ ಸಿಲುಕಿದ್ದ ಕ್ಯಾಪ್ಟನ್ ಅನ್ನು ರಕ್ಷಿಸಲಾಗಿದೆ. ಅವರನ್ನು ಸೇನಾ ಆಸ್ಪತ್ರೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಯಾಚಿನ್ ಹಿಮ ಪ್ರದೇಶದಲ್ಲಿ ಆಗಾಗ ಹಿಮಪಾತ ಸಂಭವಿಸುತ್ತಿರುತ್ತದೆ. ಅಲ್ಲಿ ಕೆಲವೊಮ್ಮೆ ತಾಪಮಾನ ಮೈನಸ್ 60 ಡಿಗ್ರಿಗೆ ಇಳಿಯುತ್ತದೆ. ಸಿಯಾಚಿನ್ ಹಿಮ ಪ್ರದೇಶದಲ್ಲಿ 2021ರಲ್ಲಿ ಸಂಭವಿಸಿದ ಹಿಮಪಾತದಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದರು. 2019ರಲ್ಲಿ ನಾಲ್ವರು ಯೋಧರು ಹಾಗೂ ಇಬ್ಬರು ಪೋರ್ಟರ್‌ ಗಳು ಸಾವನ್ನಪ್ಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News