×
Ad

ನಾಳೆ ಕೇಂದ್ರ - ರೈತ ಮುಖಂಡರ ನಡುವೆ ಮಾತುಕತೆ

Update: 2024-02-14 22:56 IST

Photo: ANI

ಚಂಡೀಗಢ : ಪ್ರತಿಭಟನಾನಿರತ ರೈತ ಮುಖಂಡರ ಜೊತೆಗೆ ಕೇಂದ್ರ ಸರಕಾರವು ಗುರುವಾರ ಚಂಡೀಗಡದಲ್ಲಿ ಮಾತುಕತೆ ನಡೆಸಲು ಸಮ್ಮತಿಸಿದೆಯೆಂದು ಪಂಜಾಬ್ ಕಿಸಾನ್ ಮಝೂರ್ ಸಂಘದ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಾಂಧೆರ್ ತಿಳಿಸಿದ್ದಾರೆ. ಅಲ್ಲಿಯವರೆಗೆ ಪ್ರತಿಭಟನಕಾರರು ಶಾಂತಿಯಿಂದ ವರ್ತಿಸುವರು ಹಾಗೂ ತಡೆಬೇಲಿಗಳನ್ನು ಮುರಿದು ಮುಂದೆ ಸಾಗುವುದಿಲ್ಲವೆಂದು ಅವರು ಭರವಸೆ ನೀಡಿದ್ದಾರೆ.

ಚಂಡೀಗಢದಲ್ಲಿ ಗುರುವಾರ ಸಂಜೆ ಐದು ಗಂಚೆಗೆ ಪ್ರತಿಭಟನಾನಿರರ ರೈತ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಯಲಿದೆಯೆಂದು ಅವರು ತಿಳಿಸಿದ್ದಾರೆ. ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆಯ ಸಹಾಯಕ ನಿತ್ಯಾನಂದ ರಾಯ್ ಅವರು ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಂಧೇರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News