ಮ್ಯಾನ್ಮಾರ್‌ನಲ್ಲಿ 4.7 ತೀವ್ರತೆಯ ಭೂಕಂಪನ : ಮಣಿಪುರ, ಅಸ್ಸಾಂನಲ್ಲೂ ಕಂಪಿಸಿದ ಭೂಮಿ
Update: 2025-09-30 19:43 IST
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ,ಸೆ.30: ಮಂಗಳವಾರ ಬೆಳಿಗ್ಗೆ ಮ್ಯಾನ್ಮಾರ್ನಲ್ಲಿ 4.7 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಮಣಿಪುರ, ನಾಗಾಲ್ಯಾಂಡ್ ಮತ್ತು ಅಸ್ಸಾಂ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.
ಬೆಳಗಿನ 6:10ಕ್ಕೆ ಮಣಿಪುರದ ಉಖ್ರುಲ್ನಿಂದ ಕೇವಲ 27 ಕಿ.ಮೀ.ದೂರದಲ್ಲಿ ಭಾರತದೊಂದಿಗೆ ಮ್ಯಾನ್ಮಾರ್ ಗಡಿಯ ಸಮೀಪದಲ್ಲಿ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರವು ತಿಳಿಸಿದೆ.
ಭೂಕಂಪನದ ಕೇಂದ್ರಬಿಂದು 15 ಕಿ.ಮೀ. ಆಳದಲ್ಲಿದ್ದು, ನಾಗಾಲ್ಯಾಂಡ್‌ನ ವೋಖಾದಿಂದ 155 ಕಿ.ಮೀ.,ದಿಮಾಪುರದಿಂದ 159 ಕಿ.ಮೀ. ಮತ್ತು ಮೊಕೊಕ್ಚುಂಗ್ನಿಂದ 177 ಕಿ.ಮೀ. ಹಾಗೂ ಮಿರೆರಮ್ನ ನಗೋಪಾದಿಂದ 171 ಕಿ.ಮೀ. ಮತ್ತು ಚಂಫಾಯ್ನಿಂದ 193 ಕಿ.ಮೀ.ದೂರದಲ್ಲಿತ್ತು.
ಮಂಗಳವಾರ ನಸುಕಿನ 4:28ರ ಸುಮಾರಿಗೆ ಟಿಬೆಟ್ನಲ್ಲೂ 3.3 ತೀವ್ರತೆಯ ಭೂಕಂಪನ ಸಂಭವಿಸಿದೆ.