×
Ad

‘ಉಡಾನ್’ ತಾರೆ ಕವಿತಾ ಇನ್ನಿಲ್ಲ

Update: 2024-02-16 22:53 IST

Photo : filmfare.com

ಅಮೃತಸರ: ಜನಪ್ರಿಯ ದೂರದರ್ಶನ ಟಿವಿ ಸರಣಿ ‘ಉಡಾನ್’ನ ನಟಿ ಕವಿತಾ ಚೌಧುರಿ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಉಡಾನ್ನಲ್ಲಿ ಕವಿತಾ ಅವರು ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರದಲ್ಲಿ ನಟಿಸಿದ್ದರು. ಮಹಿಳಾ ಸಬಲೀಕರಣದ ಕುರಿತಾದ ಈ ಟಿವಿ ಧಾರಾವಾಹಿಯು 1989 ಹಾಗೂ 1991ರ ನಡುವೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಅಭಿನಯದ ಜೊತೆಗೆ ಕವಿತಾ ಅವರು ಉಡಾನ್ ಕಥೆ ಬರೆದಿದ್ದರು ಹಾಗೂ ನಿರ್ದೇಶನವನ್ನೂ ಮಾಡಿದ್ದರು.

ತನ್ನ ಹಿರಿಯ ಸಹೋದರಿ ಹಾಗೂ ಪೊಲೀಸ್ ಅಧಿಕಾರಿ ಕಾಂಚನ್ ಚೌಧುರಿ ಭಟ್ಟಾಚಾರ್ಯರ ಬದುಕಿನಿಂದ ಸ್ಫೂರ್ತಿಪಡೆದು ಕವಿತಾ ಈ ಧಾರಾವಾಹಿಯನ್ನು ನಿರ್ಮಿಸಿದ್ದರು. 1980ರ ದಶಕದಲ್ಲಿ ಕೆಲವು ಜಾಹೀರಾತುಗಳಲ್ಲಿಯೂ ಅವರು ನಟಿಸಿದ್ದರು.

ಕವಿತಾ ಚೌಧುರಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಅಮೃತಸರದಲ್ಲಿ ನೆರವೇರಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News