×
Ad

ಕೇಂದ್ರಾಡಳಿತ ಸ್ಥಾನಮಾನ ತಾತ್ಕಾಲಿಕ ವ್ಯವಸ್ಥೆ | ಅಧಿಕಾರಿಗಳಿಗೆ ಉಮರ್ ಅಬ್ದುಲ್ಲಾ ಎಚ್ಚರಿಕೆ

Update: 2024-10-29 20:52 IST

ಉಮರ್ ಅಬ್ದುಲ್ಲಾ | PTI  

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಸ್ಥಾನಮಾನ ತಾತ್ಕಾಲಿಕ ಎಂಬ ಭರವಸೆಯನ್ನು ತಾನು ‘‘ಅತ್ಯುನ್ನತ ಮಟ್ಟ’’ದಿಂದ ಪಡೆದುಕೊಂಡಿದ್ದೇನೆ ಎಂದು ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ದಿನಗಳ ಬಳಿಕ ಸೋಮವಾರ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಶ್ರೀನಗರದಲ್ಲಿ ಆಡಳಿತಾತ್ಮಕ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ವೇಳೆ, ಅವರು ಈ ಮಾತುಗಳನ್ನು ಆಡಿದ್ದಾರೆ. ‘‘ನಮ್ಮದು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ, ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಂಡರೂ ಕೇಂದ್ರಾಡಳಿತದಿಂದ ನಮಗೆ ರಕ್ಷಣೆ ಸಿಗುತ್ತದೆ ಎಂಬುದಾಗಿ ಯಾರಾದರೂ ಭಾವಿಸಿದರೆ, ಈ ರಕ್ಷಣೆ ಕೇವಲ ತಾತ್ಕಾಲಿಕ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ’’ ಎಂದು ಅವರು ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಸರಕಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರ ಪ್ರಭಾವದ ಬಗ್ಗೆ ಮಾತನಾಡಿದ ಉಮರ್ ಅಬ್ದುಲ್ಲಾ, ಕೇಂದ್ರಾಡಳಿತ ಪ್ರದೇಶದ ಸರಕಾರದ ಉದ್ಯೋಗಿಗಳು ‘‘ಹೈಬ್ರಿಡ್ ಆಡಳಿತ ವ್ಯವಸ್ಥೆ’’ಯಂತೆ ಕೆಲಸ ಮಾಡುತ್ತಿದ್ದಾರೆ ಎಂದರು. ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು ಎಂಬುದಾಗಿ ಕೆಲವರು ಯೋಚಿಸುತ್ತಿದ್ದಾರೆ ಎಂದರು.

‘‘ಆದರೆ, ಇದು ಕೇವಲ ತಾತ್ಕಾಲಿಕ ಹಂತ ಎನ್ನುವುದನ್ನು ದಯವಿಟ್ಟು ಅರಿತುಕೊಳ್ಳಿ’’ ಎಂದು ಉಮರ್ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News