×
Ad

ಧಾರವಾಡ ಸೇರಿ 5 ಐಐಟಿಗಳ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ

Update: 2025-05-07 21:07 IST

PC : PTI 

ಹೊಸದಿಲ್ಲಿ: ಕರ್ನಾಟಕದ ಧಾರವಾಡದ ಐಐಟಿ ಸೇರಿದಂತೆ ದೇಶದ 5 ಐಐಟಿಗಳಲ್ಲಿ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ಯೋಜನೆಗೆ ಅನುಮೋದನೆ ನೀಡಿತು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

2025-26ರಿಂದ 2028-2026ರ ವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಸ್ತಾವಿತ ವಿಸ್ತರಣೆಗೆ ಒಟ್ಟು ವೆಚ್ಚ 11,828.79 ಕೋ.ರೂ. ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಐಐಟಿಗಳಲ್ಲಿ ಪ್ರಾದ್ಯಾಪಕರ ಶ್ರೇಣಿಯ 130 ಬೋಧಕ ಹುದ್ದೆಗಳನ್ನು ಸೃಷ್ಟಿಸಲು ಕೂಡ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಐಐಟಿಗಳು ಆಂಧ್ರಪ್ರದೇಶ ತಿರುಪತಿ, ಕೇರಳದ ಪಾಲಕ್ಕಾಡ್, ಚತ್ತೀಸ್‌ಗಢದ ಬಿಲಾಯಿ, ಜಮ್ಮು ಹಾಗೂ ಕಾಶ್ಮೀರದ ಜಮ್ಮು, ಕರ್ನಾಟಕದ ಧಾರವಾಡದಲ್ಲಿ ಇದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News