ಕೇಂದ್ರದ 5 ವರ್ಷದ ಎಂಎಸ್ಪಿ ಗುತ್ತಿಗೆ ಪ್ರಸ್ತಾವ ತಿರಸ್ಕರಿಸಿದ ಸಂಯುಕ್ತ ಕಿಸಾನ್ ಮೋರ್ಚಾ
Update: 2024-02-19 22:19 IST
Photo: PTI
ಹೊಸದಿಲ್ಲಿ : ಮೂರು ಮಾದರಿಯ ದ್ವಿದಳ ಧಾನ್ಯ, ಮೆಕ್ಕೆ ಜೋಳ ಹಾಗೂ ಹತ್ತಿಯನ್ನು ಹಳೆಯ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಯಲ್ಲಿ ಖರೀದಿಸಲು ಕೇಂದ್ರ ಸರಕಾರದ ಐದು ವರ್ಷದ ಗುತ್ತಿಗೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಸೋಮವಾರ ತಿರಸ್ಕರಿಸಿದೆ.
ಇದು ರೈತರ ಪ್ರಮುಖ ಬೇಡಿಕೆಯನ್ನು ದಾರಿ ತಪ್ಪಿಸುವ ಪ್ರಸ್ತಾವ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. ಅಲ್ಲದೆ, 2014ರ ಸಾರ್ವತ್ರಿಕ ಚುನಾವಣೆ ಮುನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಎಲ್ಲಾ ಬೆಳೆ (ಮೇಲಿನ ಐದು ಸೇರಿದಂತೆ 23)ಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಸೂಚಿಸಿದೆ.