×
Ad

ಹಣದ ಕಂತೆಗಳೊಂದಿಗೆ ಕುಳಿತಿರುವ ವಿಡಿಯೊ ವೈರಲ್: ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯ ವಿರುದ್ಧ ತನಿಖೆಗೆ ಆದೇಶ

Update: 2023-06-30 12:50 IST

Twitter/@Benarasiyaa

ಉನ್ನಾಂವ್: ತನ್ನ ಮಕ್ಕಳು ನೋಟಿನ ಕಂತೆಯನ್ನು ಪ್ರದರ್ಶಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕಾರಣ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ವರ್ಗಾವಣೆಗೊಳಗಾಗಿರುವ ಘಟನೆ ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಬೆಹ್ತಾ ಮುಜಾವರ್ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿರುವ ರಮೇಶ್ ಚಂದ್ರ ಸಹಾನಿಯವರ ಇಬ್ಬರು ಮಕ್ಕಳು ಹಾಸಿಗೆಯ ಮೇಲೆ ರೂ. 500 ಮುಖಬೆಲೆಯ 27 ನೋಟಿನ ಕಂತೆಗಳೊಂದಿಗೆ ಕುಳಿತಿರುವುದು ಕಂಡು ಬಂದಿದೆ. ಈ ವಿಡಿಯೊ ಸಹಾನಿಯವರ ನಿವಾಸದ್ದೆಂದು ಹೇಳಲಾಗಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಶಂಕರ್ ಮೀನಾ ಅವರು ಸಹಾನಿಯನ್ನು ವರ್ಗಾವಣೆಗೊಳಿಸಿದ್ದು, ಈ ಸಂಬಂಧ ಬಂಗಾರ್ಮಾವು ವೃತ್ತ ಪೊಲೀಸ್ ಅಧಿಕಾರಿಯಿಂದ ತನಿಖೆಗೆ ಆದೇಶಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವೃತ್ತ ಪೊಲೀಸ್ ಅಧಿಕಾರಿ ಪಂಕಜ್ ಸಿಂಗ್, ಸಾಮಾಜಿಕ ಮಾಧ್ಯಮದಲ್ಲಿನ ವೈರಲ್ ವಿಡಿಯೊದಲ್ಲಿ ಸಹಾನಿ ಕುಟುಂಬದ ಸದಸ್ಯರು ರೂ. 500 ಮುಖಬೆಲೆಯ ನೋಟಿನ ಕಂತೆಗಳೊಂದಿಗೆ ಕುಳಿತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ. 

ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು PTI ಸುದ್ದಿ ಸಂಸ್ಥೆಯು ವರ್ಗಾವಣೆಗೊಳಗಾಗಿರುವ ಠಾಣಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಕರೆಯನ್ನು ಸ್ವೀಕರಿಸಿಲ್ಲ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News