×
Ad

ವಾರಾಣಸಿ: ಘಾಟ್‌ ಗಳು ನೀರಿನಿಂದ ಆವೃತ; ಮೇಲ್ಛಾವಣಿಗಳಲ್ಲಿ ಶವದಹನ

Update: 2025-08-29 20:43 IST

PC :  PTI 

ವಾರಾಣಸಿ, ಆ. 29: ಗಂಗಾ ಮತ್ತು ವರುಣ ನದಿಗಳ ನೀರಿನ ಮಟ್ಟವು ಹೆಚ್ಚುತ್ತಿದ್ದು ವಾರಾಣಸಿಯಲ್ಲಿ ಹೊಸದಾಗಿ ಪ್ರವಾಹ ಕಾಣಿಸಿಕೊಂಡಿದೆ. ತಗ್ಗು ಪ್ರದೇಶಗಳು ನೀರಿನಿಂದ ಆವೃತವಾಗಿದ್ದು ಸಾಮಾನ್ಯ ಜನಜೀವನಕ್ಕೆ ಧಕ್ಕೆಯಾಗಿದೆ.

ವಾರಾಣಸಿಯ ಎಲ್ಲಾ ಪ್ರಸಿದ್ಧ ಘಾಟ್‌ಗಳು ನೀರಿನಿಂದ ಆವೃತವಾಗಿವೆ. ಮಣಿಕರ್ಣಿಕ ಮತ್ತು ಹರಿಶ್ಚಂದ್ರ ಘಾಟ್‌ ಗಳಲ್ಲಿ ಶವಗಳನ್ನು ಮೇಲ್ಛಾವಣಿಗಳಲ್ಲಿ ಮತ್ತು ಸಮೀಪದ ರಸ್ತೆಗಳಲ್ಲಿ ಮಾಡಲಾಗುತ್ತಿದೆ. ದಶಾಶ್ವಮೇಧ ಘಾಟ್‌ನಲ್ಲಿ ನಡೆಯುವ ಪ್ರಸಿದ್ಧ ‘‘ಗಂಗಾ ಆರತಿ’’ಯನ್ನು ಈಗ ಸಾಂಕೇತಿಕವಾಗಿ ಸಮೀಪದ ಮೇಲ್ಛಾವಣಿಯಲ್ಲಿ ಮಾಡಲಾಗುತ್ತಿದೆ.

ಗಂಗಾ ನದಿಯ ನೀರಿನ ಮಟ್ಟ ಶುಕ್ರವಾರ 71 ಮೀಟರ್ ಮಟ್ಟವನ್ನು ತಲುಪಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ. ವಾರಾಣಸಿಯಲ್ಲಿ ನದಿಯ ಅಪಾಯ ಮಟ್ಟವು 71.262 ಮೀಟರ್ ಆಗಿದೆ.

ರಮಣ, ಸಾಮ್ನೆ ಘಾಟ್, ನಗ್ವ, ಕೊನಿಯ ಮತ್ತು ಹೂಕುಲ್‌ ಗಂಜ್ ಪ್ರದೇಶಗಳಲ್ಲಿ ನೆರೆ ನೀರು ಮನೆಗಳನ್ನು ಪ್ರವೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News