×
Ad

ಅಸ್ಸಾಂ: ಇವಿಎಂ ಹೊತ್ತ ಎಸ್‌ಯುವಿ ನೀರಿನಲ್ಲಿ ಮುಳುಗಡೆ; ಹಾನಿಗೊಂಡ ಇವಿಎಂ

Update: 2024-04-19 17:27 IST

ಸಾಂದರ್ಭಿಕ ಚಿತ್ರ | PC : PTI 

ಉತ್ತರ ಲಖೀಂಪುರ್:‌ ಅಸ್ಸಾಂನ ಲಖೀಂಪುರ್‌ ಕ್ಷೇತ್ರದಲ್ಲಿ ಇಂದು ಇವಿಎಂ ಸಾಗಿಸುತ್ತಿದ್ದ ಎಸ್‌ಯುವಿಯನ್ನು ಹೊತ್ತು ಸಾಗುತ್ತಿದ್ದ ಯಾಂತ್ರೀಕೃತ ದೋಣಿಯೊಂದು ದಿಯೋಪನಿ ನದಿಯಲ್ಲಿ ಹಠಾತ್‌ ನೀರಿನ ಮಟ್ಟ ಏರಿಕೆಯಿಂದಾಗಿ ಭಾಗಶಃ ಮುಳುಗಿದ ಘಟನೆ ವರದಿಯಾಗಿದೆ.

ವಾಹನದೊಳಗೆ ನೀರು ನುಗ್ಗುವ ಮುನ್ನ ಚಾಲಕ ಮತ್ತು ಚುನಾವಣಾ ಅಧಿಕಾರಿ ವಾಹನದಿಂದ ಹೊರಬರುವಲ್ಲಿ ಯಶಸ್ವಿಯಾದರು.

ಸಾದಿಯಾದ ಅಮರಪುರ್‌ ಕ್ಷೇತ್ರದಲ್ಲಿ ಇವಿಎಂ ಒಂದು ತಾಂತ್ರಿಕ ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಅದನ್ನು ಬದಲಿಸಲೆಂದು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ತಕ್ಷಣ ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ಸ್ಥಳಕ್ಕೆ ಕಳುಹಿಸಿ ವಾಹನವನ್ನು ನೀರಿನಿಂದ ಹೊರತೆಗೆಯಲಾಯಿತು. ಆದರೆ ಈ ಘಟನೆಯಲ್ಲಿ ಇವಿಎಂಗೆ ಹಾನಿಯುಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News