×
Ad

ಬಿಹಾರ ವಿಧಾನ ಸಭೆ ಸ್ಪೀಕರ್ ಸ್ಥಾನಕ್ಕೆ ನಂದ ಕಿಶೋರ್ ಯಾದವ್ ಆಯ್ಕೆ

Update: 2024-02-15 20:43 IST

 Photo Credit: ANI 

ಪಾಟ್ನಾ: ಬಿಹಾರ ವಿಧಾನ ಸಭೆಯ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯ ಹಿರಿಯ ನಾಯಕ ನಂದ ಕಿಶೋರ್ ಯಾದವ್ ಅವರು ಗುರುವಾರ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಶಾಸಕ ತೇಜಸ್ವಿ ಯಾದವ್ ಅವರು ನೂತನ ಸ್ಪೀಕರ್ ಆಗಿ ಆಯ್ಕೆಯಾಗಿರುವ ನಂದ ಕಿಶೋರ್ ಯಾದವ್ ಅವರನ್ನು ಅವರ ಸ್ಥಾನಕ್ಕೆ ಕರೆದುಕೊಂಡು ಬಂದರು.

ಬಿಹಾರದ ಸ್ಪೀಕರ್ ಆಗಿದ್ದ ಆರ್ಜೆಡಿಯ ಅವಧ್ ಬಿಹಾರಿ ಚೌಧರಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಪದಚ್ಯುತಗೊಳಿಸಲಾಗಿತ್ತು. ಇದಾದ ಒಂದು ದಿನದ ಬಳಿಕ ಸ್ಪೀಕರ್ ಸ್ಥಾನಕ್ಕೆ ಪಾಟ್ನಾ ಸಾಹೀಬ್ ವಿಧಾನ ಸಭಾ ಕ್ಷೇತ್ರದ ಶಾಸಕ ನಂದ ಕಿಶೋರ್ ಯಾದವ್ ಅವರು ನಾಮಪತ್ರ ಸಲ್ಲಿಸಿದ್ದರು.

ಸ್ಪೀಕರ್ ಸ್ಥಾನದಿಂದ ಚೌಧರಿ ಅವರು ಪದಚ್ಯುತಗೊಂಡ ಬಳಿಕ ಉಪ ಸ್ಪೀಕರ್ ಜೆಡಿಯುನ ಮಹೇಶ್ವರ್ ಹಝಾರಿ ಅವರು ಸದನದ ಕಲಾಪಗಳನ್ನು ನಿರ್ವಹಿಸುತ್ತಿದ್ದರು.

ನಂದ ಕಿಶೋರ್ ಯಾದವ್ ಅವರು 1978ರಲ್ಲಿ ಪಾಟ್ನಾ ಮುನ್ಸಿಪಲ್ ಕಾರ್ಪೋರೇಶನ್ ನ ಕೌನ್ಸಿಲರ್ ಹಾಗೂ 1982ರಲ್ಲಿ ಪಾಟ್ನಾದ ಉಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ತನ್ನ ರಾಜಕೀಯ ಪಯಣ ಆರಂಭಿಸಿದ್ದರು.

1995ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ನಂದ ಕಿಶೋರ್ ಯಾದವ್ ಅವರು ಅನಂತರ ನಿತೀಶ್ ಕುಮಾರ್ ಅವರ ಸರಕಾರದಲ್ಲಿ ಹಲವು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News