×
Ad

ವಿಶಾಖಪಟ್ಟಣಂ ಅಗ್ನಿ ದುರಂತ: 25 ಮೀನುಗಾರಿಕಾ ದೋಣಿಗಳು ಭಸ್ಮ

Update: 2023-11-20 09:59 IST

Photo: twitter

ವಿಶಾಖಪಟ್ಟಣಂ: ವಿಶಾಖಪಟ್ಟಣಂ ಬಂದರಿನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 23 ಮೀನುಗಾರಿಕಾ ದೋಣಿಗಳು ಭಸ್ಮವಾಗಿವೆ. ಈ ಆಘಾತಕಾರಿ ಘಟನೆಯಿಂದ ಸುಮಾರು 30 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕೆಲ ಕಿಡಿಗೇಡಿಗಳು ದೋಣಿಗಳಿಗೆ ಬೆಂಕಿ ಹಚ್ಚಿರಬೇಕು ಎನ್ನುವುದು ಮೀನುಗಾರರ ಶಂಕೆ. ದೋಣಿಯಲ್ಲಿ ಪಾರ್ಟಿ ಮಾಡುತ್ತಿದ್ದುದು ದುರಂತಕ್ಕೆ ಕಾರಣವಾಗಿರಬೇಕು ಎಂಬ ಅನುಮಾನವೂ ಇದೆ.

ತಮ್ಮ ಜೀವನಾಧಾರವಾಗಿರುವ ದೋಣಿಗಳು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಮೀನುಗಾರರು ಅಸಹಾಯಕರಾಗಿ ನೋಡುತ್ತಿರುವ ಸಂದರ್ಭದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ಮಾಡುತ್ತಿರುವ ದೃಶ್ಯಾವಳಿಗಳು ಕಂಡುಬರುತ್ತಿವೆ.

ಕೆಲ ದೋಣಿಗಳಲ್ಲಿ ಸ್ಫೋಟ ಸಂಭವಿಸಿ, ಇಂಧನ ಟ್ಯಾಂಕ್‍ಗಳಿಗೆ ಕೂಡಾ ಬೆಂಕಿ ಹತ್ತಿಕೊಂಡಿತು. ಇದು ಇಡೀ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಯಿತು. ರಾತ್ರಿ 11.30ರ ಸುಮಾರಿಗೆ ದುರಂತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ ರೆಡ್ಡಿ ಹೇಳಿದ್ದಾರೆ. ದೋಣಿಗಳಲ್ಲಿದ್ದ ಸಿಲಿಂಡರ್‍ಗಳು ಸ್ಫೋಟಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಜನತೆ ದೂರ ಇರುವಂತೆ ನಾವು ಮನವಿ ಮಾಡಿದ್ದೇವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News