×
Ad

ರಾಹುಲ್ ಗಾಂಧಿ ಧೈರ್ಯವಂತ ರಾಜಕಾರಣಿ : ನಟ ಸೈಫ್ ಅಲಿ ಖಾನ್ ಪ್ರಶಂಸೆ

Update: 2024-09-27 23:42 IST

  ಬಾಲಿವುಡ್ ನಟ ಸೈಫ್ ಅಲಿ ಖಾನ್ , ರಾಹುಲ್ ಗಾಂಧಿ PC : NDTV

ಮುಂಬೈ: “ರಾಹುಲ್ ಗಾಂಧಿಗೆ ಟೀಕೆಯನ್ನು ಹೇಗೆ ಎದುರಿಸಬೇಕು ಎಂಬುದು ಗೊತ್ತಿದೆ. ಅವರು ಧೈರ್ಯವಂತ ಮತ್ತು ಪ್ರಾಮಾಣಿಕ ರಾಜಕಾರಣಿ”, ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಶಂಸಿಸಿದ್ದಾರೆ.

ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯಿಂದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ವರೆಗೆ ಯಾರು ಧೈರ್ಯವಂತ ರಾಜಕಾರಣಿಗಳು? ಯಾರು ದೇಶವನ್ನು ಮುನ್ನಡೆಸಬಲ್ಲರು ಎಂಬ ಪ್ರಶ್ನೆಗೆ, ಎಲ್ಲರೂ ಧೈರ್ಯವಂತ ರಾಜಕಾರಣಿಗಳು ಎಂದು ಉತ್ತರಿಸಿದ್ದಾರೆ.

ಈ ಹಿಂದೆ ಅವಮಾನಗಳನ್ನು ಎದುರಿಸಿ ಈ ಹಂತಕ್ಕೆ ಬೆಳೆದ ರಾಹುಲ್ ಗಾಂಧಿಯನ್ನು ಸೈಫ್ ಅಲಿ ಖಾನ್ ವಿಶೇಷವಾಗಿ ಹೊಗಳಿದರು.

"ರಾಹುಲ್ ಗಾಂಧಿ ಸಾಧನೆ ಪರಿಣಾಮಕಾರಿ ಎಂದು ನನಗನ್ನಿಸುತ್ತದೆ. ಅವರು ಹೇಳಿದ್ದನ್ನು ಮತ್ತು ಮಾಡಿದ್ದನ್ನು ಜನ ಅಗೌರವಿಸುತ್ತಿದ್ದ ಕಾಲವೊಂದಿತ್ತು. ಆದರೆ, ಕಠಿಣ ಪರಿಶ್ರಮದ ಮೂಲಕ ತಮ್ಮ ಕುರಿತು ಕೇಳಿ ಬಂದಿದ್ದ ಎಲ್ಲ ಟೀಕೆಗಳನ್ನೂ ಕುತೂಹಲಭರಿತ ಮಾರ್ಗದ ಮೂಲಕ ಹಿಮ್ಮೆಟ್ಟಿಸಿದ್ದಾರೆ" ಎಂದು ಸೈಫ್ ಅಲಿ ಖಾನ್ ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News