×
Ad

ಶಿವಸೇನಾ ಇಲ್ಲದೆ ಇದ್ದಲ್ಲಿ ಶ್ರೀರಾಮ ಮಂದಿರ ಸಾಧ್ಯವಾಗುತ್ತಿರಲಿಲ್ಲ : ಸಂಜಯ್ ರಾವತ್

Update: 2024-01-23 23:13 IST

Photo: X/@SvhivSenaUBT_

ನಾಶಿಕ್ : ಶ್ರೀರಾಮನ ಜೊತೆ ತನ್ನ ಪಕ್ಷದ ನಂಟು ಅತ್ಯಂತ ಹಳೆಯದಾದುದು ಹಾಗೂ ಗಾಢವಾದ ಭಾವನಾತ್ಮಕತೆಯಿಂದ ಕೂಡಿದೆಯೆಂದು ಶಿವಸೇನಾ (ಉದ್ದವ್) ಬಣದ ನಾಯಕ ಸಂಜಯ್ ರಾವತ್ ಅವರು ಹೇಳಿದ್ದಾರೆ. ಒಂದು ವೇಳೆ ತನ್ನ ಪಕ್ಷವು ಇಲ್ಲದೇ ಇರುತ್ತಿದ್ದರೆ ಅಯೋಧ್ಯೆಯ ದೇವಾಲಯದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯು ಸಾಧ್ಯವಾಗುತ್ತಿರಲಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಶಿಕ್ ನಲ್ಲಿ ಮಂಗಳವಾರ ಪಕ್ಷದ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಸ್ಥಾಪನೆಗಾಗಿ ಶಿವಸೇನಾದ ಹುಲಿಗಳು ದಿಟ್ಟತನವನ್ನು ಪ್ರದರ್ಶಿಸಿದರು. ಇದರಿಂದಾಗಿ ಪ್ರಧಾನಿಗೆ ಶ್ರೀರಾಮನ ಪ್ರಾಣಪ್ರತಿಷ್ಠೆ ಮಾಡಲು ಸಾಧ್ಯವಾಯಿತು ಎಂದವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News