×
Ad

Haryana| ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಲಿಸುತ್ತಿದ್ದ ವ್ಯಾನ್‌ನಿಂದ ಹೊರಕ್ಕೆ ತಳ್ಳಿದ ದುಷ್ಕರ್ಮಿಗಳು: ಸ್ಥಿತಿ ಗಂಭೀರ

Update: 2025-12-31 15:32 IST

ಸಾಂದರ್ಭಿಕ ಚಿತ್ರ (Photo: PTI)

ಫರಿದಾಬಾದ್: ಹರ್ಯಾಣದ ಫರಿದಾಬಾದ್‌ನಲ್ಲಿ ಚಲಿಸುತ್ತಿದ್ದ ವ್ಯಾನ್‌ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ರಸ್ತೆಗೆ ಎಸೆದಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮಧ್ಯರಾತ್ರಿ ವಿವಾಹಿತ ಮಹಿಳೆ ಮನೆಗೆ ಹೋಗಲು ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ವ್ಯಾನ್‌ನಲ್ಲಿ ಬಂದ ಇಬ್ಬರು ಆಕೆಯನ್ನು ಮನೆಗೆ ಬಿಡುವುದಾಗಿ ಭರವಸೆ ನೀಡಿ ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ವಾಹನ ಆಕೆಯ ಮನೆಗೆ ತೆರಳುವ ಬದಲು ಗುರ್ಗಾಂವ್ ರಸ್ತೆಯ ಕಡೆಗೆ ತೆರಳಿದೆ. ಮಹಿಳೆ ಸುಮಾರು ಎರಡೂವರೆ ಗಂಟೆಗಳ ಕಾಲ ವ್ಯಾನ್‌ನಲ್ಲಿದ್ದಳು. ಆಕೆಯನ್ನು ಬೆದರಿಸಿ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ, ಎಸ್‌ಜಿಎಂ ನಗರದ ರಾಜಾ ಚೌಕ್ ಬಳಿ ಚಲಿಸುತ್ತಿದ್ದ ವ್ಯಾನ್‌ನಿಂದ ಮಹಿಳೆಯನ್ನು ಹೊರಕ್ಕೆ ತಳ್ಳಲಾಗಿದೆ. ಮಹಿಳೆಯ ಮುಖಕ್ಕೆ ಗಂಭೀರವಾದ ಗಾಯಗಳಾಗಿವೆ.

ಘಟನೆ ಬಗ್ಗೆ ಮಹಿಳೆ ತನ್ನ ಸಹೋದರಿಗೆ ಪೋನ್ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.  ಕುಟುಂಬದ ಸದಸ್ಯರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆಕೆಯ ಮುಖಕ್ಕೆ 10 ರಿಂದ 12 ಹೊಲಿಗೆಗಳನ್ನು ಹಾಕಿದ್ದಾರೆ. ಆಕೆಯ ಸ್ಥಿತಿ ಸ್ಥಿರವಾಗಿದ್ದರೂ, ಸಂತ್ರಸ್ತೆ ಆಘಾತದ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಸಂತ್ರಸ್ತ ಮಹಿಳೆ ವಿವಾಹಿತಳಾಗಿದ್ದು, ಆಕೆಗೆ ಮೂವರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News