×
Ad

ಜಲಪಾತದ ಭೋರ್ಗರೆವ ನೀರಿನ ಮಧ್ಯೆ ವಿಡಿಯೊ ಮಾಡಲು ಹೋಗಿ ನೀರುಪಾಲಾದ ಯೂಟ್ಯೂಬರ್

Update: 2025-08-25 16:42 IST

Screengrab:X/@AshishDevliyal1

ಕೊರಾಪುಟ್: ಜಲಪಾತದ ಭೋರ್ಗರೆವ ನೀರಿನ ಮಧ್ಯೆ ವಿಡಿಯೊ ಮಾಡಲು ತೆರಳಿದ್ದ ಯೂಟ್ಯೂಬರ್ ಓರ್ವ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಶನಿವಾರ ಒಡಿಶಾದ ಕೊರಾಪುಟ್‌ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಸಾಗರ್ ತುಡು ಎಂದು ಗುರುತಿಸಲಾಗಿದೆ. ಬೆರಾಮ್ಪುರ ನಿವಾಸಿಯಾದ ಆತ ತನ್ನ ಸ್ನೇಹಿತರೊಂದಿಗೆ ದುಮುಡಾ ಜಲಪಾತಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸಾಗರ್ ತುಡು ನೀರಿನ ಮಧ್ಯೆ ನಿಂತಿದ್ದು, ಈ ದೃಶ್ಯವನ್ನು ಡ್ರೋನ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಈ ವೇಳೆ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ. ಈ ವೇಳೆ ಯೂಟ್ಯೂಬರ್ ನಿಯಂತ್ರಣ ಕಳೆದುಕೊಂಡು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳದಲ್ಲಿದ್ದ ಪ್ರವಾಸಿಗರು, ಸ್ಥಳೀಯರು ಆತನನ್ನು ರಕ್ಷಿಸಲು ಯತ್ನಿಸಿದರೂ, ಅದು ವಿಫಲವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು‌ NDTV ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News