×
Ad

ಜನವರಿ 3 ಕಕ್ಕಿಂಜೆಯಲ್ಲಿ 11 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2015-12-30 18:23 IST

ಬೆಳ್ತಂಗಡಿ : ಮನಾರತ್‌ಅಲ್‌ಮಸಾಅದ್ ವೆಲ್ಫೇರ್ ಎಸೋಸಿಯೇಷನ್ ಕಕ್ಕಿಂಜೆ ಸೆಂಟರ್‌ ಇದರ ವತಿಯಿಂದ ಜನವರಿ 3 ಆದಿತ್ಯವಾರ ಕಕ್ಕಿಂಜೆ ನೂರುಲ್‌ಇಸ್ಲಾಂ ಮದರಸ ಮೈದಾನದಲ್ಲಿ 11 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು ಸಮಸ್ತ ಮುಷಾವರ ಸದಸ್ಯರಾದ ಮಿತ್ತಬೈಲ್‌ಅಬ್ದುಲ್‌ಜಬ್ಬಾರ್‌ ಉಸ್ತಾದ್‌ ದುವಾ ನೇತೃತ್ವದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಖಾಝೀ ತ್ವಾಖಾ ಅಮ್ಮದ್ ಮುಸ್ಲಿಯಾರ್ ಉದ್ಘಾಟನೆ ಹಾಗೂ ನಿಖಾಹ್ ನೇತೃತ್ವ ವಹಿಸಲಿದ್ದಾರೆ.

ಬೆಳ್ತಂಗಡಿ ಶಾಸಕರಾದ ಕೆ.ವಸಂತ ಬಂಗೇರರು ಅಧ್ಯಕ್ಷತೆ ವಹಿಸಲಿದ್ದು, ಕಕ್ಕಿಂಜೆ ಮುದರ್ರಿಸ್ ಐ.ಕೆ.ಮೂಸಾ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.ಕುಂಬ್ರ ಕೆ.ಐ.ಸಿ.ಪ್ರೊಫೆಸರ್‌ ಅನೀಸ್‌ ಕೌಸರಿ ಮುಖ್ಯ ಭಾಷಣಗೈಯಲಿದ್ದಾರೆ. ಕಾರ್ಯಕ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ, ಆರೋಗ್ಯ ಸಚಿವರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮೂಢಾ ಅಧ್ಯಕ್ಷರಾದ ಇಬ್ರಾಹಿಂ ಕೋಡಿಜಾಲ್, ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷರಾದ ಎಸ್.ಎಂ.ರಶೀದ್ ಹಾಜಿ, ಕನಚ್ಚೂರು ಸಮೂಹ ಸಂಸ್ಥೆಗಳ ಛೆಯರ್‌ಮೇನ್ ಹಾಜಿ ಯು.ಕೆ. ಮೋನು, ಜಿಲ್ಲಾ ಕಾಂಗ್ರೆಸ್‌ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷರಾದ ಎಂ.ಎಸ್. ಮುಹಮ್ಮದ್, ತೋಟತ್ತಾಡಿ ಚರ್ಚ್‌ ಧರ್ಮಗುರು ರೇ.ಫಾ. ಕುರ್ಯಕೋಸ್, ಹನೀಫ್ ಹಾಜಿ ಹಜ್ಜಾಜಿ, ಜಿಲ್ಲಾ ಪಂಚಾಯತ್ ಸದಸ್ಯರು ಕೊರಗಪ್ಪ ನಾಯ್ಕ, ಮುಸ್ಲಿಂ ಸೆಂಟ್ರಲ್‌ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ, ಕಾಂಗ್ರೆಸ್ ವಕ್ತಾರ ಸಾಹುಲ್ ಹಮೀದ್, ಮುಸ್ತಾಫಕೆಂಫಿ, ಗ್ರಾಮ ಅಭಿವೃದ್ಧಿ ಅಧಿಕಾರಿ ಪ್ರಕಾಶ ಶೆಟ್ಟಿ ನೊಚ್ಚ ಹಾಗೂ ಇನ್ನಿತರ ಉಲಮಾಉಮರಾ ನೇತಾರರು ಭಾಗವಹಿಸಲಿದ್ದು ಸಂಜೆ 6-30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಮತ ಪ್ರಭಾಷಣ ಜರಗಲಿದೆ. 

ಸಮಾರಂಭದಲ್ಲಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೋಶಾಧಿಕಾರಿಯೂ, ಕಾಂಞಂಗಾಡ್‌ ಖಾಝಿಯೂ ಆದ ಸೈಯದ್‌ ಜಿಫ್ರಿ ಮುತ್ತುಕೋಯ ತಂಙಳ್ ದುಆ ಆಶೀವಚರ್ನ ನೀಡಲಿದ್ದು, ಕೆ.ಆರ್. ಹುಸೈನ್‌ ದಾರಿಮಿ ರೆಂಜಲಾಡಿ ಸಮಾರಂಭವನ್ನು ಉದ್ಘಾಟನೆಗೈಯಲಿದ್ದು ಖ್ಯಾತ ಭಾಷಣಗಾರ ಸಲಾವುದ್ದೀನ್ ಫೈಝಿ ವೆನ್ನಿಯೂರು ಕೇರಳ ಮುಖ್ಯ ಭಾಷಣಗೈಯಲಿದ್ದಾರೆ. ಹಾಗೂ ಜನವರಿ 2 ರಂದು ಸಂಜೆ 4-00ಕ್ಕೆ ಕಕ್ಕಿಂಜೆಯಲ್ಲಿ 63 ವರ್ಷಗಳ ಕಾಲ ಮುಅದ್ದೀನ್ ಆಗಿ ಸೇವೆಯನ್ನು ಸಲ್ಲಿಸಿದ ಕೆ.ಹೆಚ್. ಹೈದರ್ ಹಾಜಿ ಉಸ್ತಾದ್‌ರವರ ಅಧ್ಯಕ್ಷತೆಯಲ್ಲಿ ವಧೂವರರಿಗೆ ಚಿನ್ನಾಭರಣ ಹಸ್ತಾಂತರ ಕಾರ್ಯಕ್ರಮ ಜರಗಲಿದ್ದು ಚಾರ್ಮಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶ್ರೀಮತಿ ಶೈಲಜಾ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಹೇಮಾವತಿ ಮತ್ತು ಶ್ರೀಮತಿ ಸರೋಜಿನಿ ಭಾಗವಹಿಸಲಿದ್ದಾರೆ.

11 ಜೋಡಿ ವಧು ಬೆಳ್ತಂಗಡಿ ತಾಲೂಕಿಗೊಳಪ್ಪಟ್ಟ ಕಕ್ಕಿಂಜೆ, ಚಾರ್ಮಾಡಿ, ಮುಂಡಾಜೆ, ಕಾಜೂರು ಪ್ರದೇಶಕ್ಕೊಳಪಟ್ಟವರಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷರಾದ ಹಸನಬ್ಬ ಚಾರ್ಮಾಡಿ, ಉಪಾಧ್ಯಕ್ಷರಾದ ಕೆ.ಎ.ರಹ್ಮಾನ್, ಕಾರ್ಯದರ್ಶಿ ಪಿ.ಕೆ. ಬಶೀರ್, ಸಂಚಾಲಕರಾದ ಇಲ್ಯಾಸ್‌ ಅಹಮದ್, ಕೆ.ಎಂ.ಖಾದರ್,  ಶರೀಫ್‌ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.

                                                                                               

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News