×
Ad

ಜೇಸಿಐ ವತಿಯಿಂದ ಉಚಿತ ರಕ್ತ ವರ್ಗೀಕರಣ ಶಿಬಿರ

Update: 2015-12-30 18:33 IST

ಕಡಬ, ಡಿ.30. ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.) ವತಿಯಿಂದ ಅಯೋಜಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳ ಉಚಿತ ರಕ್ತ ವರ್ಗೀಕರಣ ಶಿಬಿರವು ಐತ್ತೂರು ಗ್ರಾಮದ ಸುಂಕದಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕಡಬದ ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‌ನವರ ಸಹಕಾರದೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ಜೇಸಿಐ ಕಡಬ ಕದಂಬ ಘಟಕದ ಅಧ್ಯಕ್ಷ ಜಯರಾಮ ಗೌಡ ಆರ್ತಿಲ, ಜೇಸಿ ವಲಯಾಧಿಕಾರಿ ಅಶೋಕ್‌ಕುಮಾರ್ ಪಿ., ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಎನ್.ಕೆ., ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಜೀಜ್, ಶಾಲಾ ಮುಖ್ಯಶಿಕ್ಷಕಿ ವೀಣಾ, ಶಿಕ್ಷಕಿಯರಾದ ಸುಂದರಿ, ಸುಜಾತ, ಮಮತಾ, ಪದ್ಮಾ, ಜೀವಿತಾ ಉಪಸ್ಥಿತರಿದ್ದರು. ಪ್ರಯೋಗಾಲಯ ತಂತ್ರಜ್ಞರಾದ ಸರಿತಾ ಹಾಗೂ ಖೈರುನ್ನೀಸಾ ಶಿಬಿರವನ್ನು ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News