×
Ad

ಸಿಮಿ ತರಬೇತಿ ಶಿಬಿರ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಎನ್‌ಐಎ

Update: 2016-01-01 23:55 IST

ಹೊಸದಿಲ್ಲಿ,ಜ.1: ದೇಶದ್ರೋಹ ಮತ್ತು ಇತರ ಆರೋಪಗಳಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಾದ ವಾಸಿಕ್ ಬಿಲ್ಲಾ ಮತ್ತು ಆಲಮ್‌ಜೇಬ್ ಅಫ್ರಿದಿ ವಿರುದ್ಧದ ಡಿಸೆಂಬರ್ 2007ರ ವಾಗಮಣ್ ಸಿಮಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಪ್ರಕರಣದಲ್ಲಿ ತನ್ನ ಅಂತಿಮ ದೋಷಾರೋಪ ಪಟ್ಟಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಕೇರಳದ ಎರ್ನಾಕುಳಂನಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಸಲ್ಲಿಸಿದೆ.
ಎನ್‌ಐಎ ಪ್ರಕರಣದಲ್ಲಿ 30 ಆರೋಪಿಗಳ ವಿರುದ್ಧ ಮೊದಲ ದೋಷಾರೋಪ ಪಟ್ಟಿಯನ್ನು 2011ರಲ್ಲಿ ಮತ್ತು ಆರು ಆರೋಪಿಗಳ ವಿರುದ್ಧ ಪೂರಕ ದೋಷಾರೋಪ ಪಟ್ಟಿಯನ್ನು 2013ರಲ್ಲಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News