ಇಂದಿನ ಕಾರ್ಯಕ್ರಮ

Update: 2016-01-01 18:35 GMT

ಬಹುಮಾನ ವಿತರಣೆ: ಸುವರ್ಣ ಸಂಭ್ರಮದಲ್ಲಿರುವ ರಂಗಭೂಮಿ ಉಡುಪಿ, ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಕಾರದೊಂದಿಗೆ ಇತ್ತೀಚೆಗೆ ಆಯೋಜಿಸಿದ 36ನೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಹಿರಿಯ ನಿರ್ದೇಶಕ ಶ್ರೀನಿವಾಸ ಜಿ.ಕಪ್ಪಣ್ಣರಿಗೆ ‘ರಂಗ ಕಲಾರತ್ನ’ ಪ್ರಶಸ್ತಿ ಪ್ರದಾನ. ಸುಮನಸಾ ಕೊಡವೂರು ಇವರಿಂದ ‘ದಾರಾಶಿಕೊ’ ಮರು ಪ್ರದರ್ಶನ. ಸಮಯ: ಸಂಜೆ 5:45ಕ್ಕೆ. ಸ್ಥಳ:ಎಂಜಿಎಂ ಕಾಲೇಜಿನ ಮುದ್ದಣ ಮಂಟಪ, ಉಡುಪಿ.

ಮಧುರ ಮಿಲನ:

ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3180 ಇದರ 46ನೆ ರೋಟರಿ ಜಿಲ್ಲಾ ಸಮ್ಮೇಳನ ‘ಮಧುರ ಮಿಲನ’ದ ಉದ್ಘಾಟನೆ. ಸಮಯ: ಬೆಳಗ್ಗೆ 9ಕ್ಕೆ. ಸ್ಥಳ: ಎಂಐಟಿ ಆವರಣ, ಮಣಿಪಾಲ. ಜಿಲ್ಲಾ ಕಾಂಗ್ರೆಸ್ ಸಭೆ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸರ್ವ ಸದಸ್ಯರ ಸಭೆ. ಸಮಯ: ಅಪರಾಹ್ನ 3ಕ್ಕೆ. ಸ್ಥಳ: ಕಾಂಗ್ರೆಸ್ ಭವನ, ಅಜ್ಜರಕಾಡು ಉಡುಪಿ. ರಂಗಪ್ರವೇಶ: ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನದ ವತಿಯಿಂದ ಅಮೃತ ಪ್ರಸಾದ್‌ರ ರಂಗ ಪ್ರವೇಶ. ಸಮಯ: ಸಂಜೆ 6ಕ್ಕೆ. ಸ್ಥಳ: ಶಾರದಾ ಕಲ್ಯಾಣ ಮಂಟಪ, ಕುಂಜಿಬೆಟ್ಟು, ಉಡುಪಿ.

ಪ್ರವಚನ: ಮಣಿಪಾಲದ ಬ್ರಹ್ಮಕುಮಾರೀಸ್ ವತಿಯಿಂದ ರಾಜಯೋಗಿನಿ ರಾಜಸ್ತಾನ ವೌಂಟ್ ಅಬುವಿನ ಬಿ.ಕೆ.ಉಷಾರಿಂದ ಮನೋಚೈತನ್ಯ ಹೆಚ್ಚಿಸುವ ಪ್ರೇರಣಾತ್ಮಕ ಪ್ರವಚನ. ಸಮಯ: ಸಂಜೆ 6ಕ್ಕೆ. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ, ಉಡುಪಿ.

ಕೃಷ್ಣ ಮಠ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ರಾಜಾಂಗಣದಲ್ಲಿ ವಿದ್ವಾನ್ ಮಧ್ವೇಶ ಆಚಾರ್ಯ ಉಡುಪಿ ಇವರಿಂದ ಶ್ರೀಮದ್ಭಾಗತ ಪುರಾಣ ಮಂಗಳ, 6ಕ್ಕೆ ರಾಜಾಂಗಣದಲ್ಲಿ ನಿರಂತರ ಜ್ಞಾನಯಜ್ಞದಲ್ಲಿ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥರಿಂದ ರಾಜಸೂಯದ ಕುರಿತು ಪ್ರವಚನ. 7:30ರಿಂದ ರಾಜಾಂಗಣದಲ್ಲಿ ಪರ್ಯಾಯ ಅವಧಿಯ ಸಾಂಸ್ಕೃತಿಕ ಕಾರ್ಯ ಕ್ರಮಗಳ ಮಂಗಳ ಮಹೋತ್ಸವದ ಅಂಗವಾಗಿ ಬೆಂಗಳೂರಿನ ವಿದುಷಿ ಪದ್ಮಿನಿ ಕುಮಾರ್ ಎಂ.ಎ. ಮತ್ತು ಬಳಗದಿಂದ ಭರತನಾಟ್ಯ. 7:15ಕ್ಕೆ ಸುವರ್ಣ ರಥೋತ್ಸವ.

ಜನಜಾಗೃತಿ ಸಭೆ: ಜಲ್ಲಿ ಕೃಷರ್‌ನಿಂದ ಶಿವಪುರ ಗ್ರಾಮದ ಯಳಗೋಳಿ, ಕಲ್ಮುಂಡ, ಕುಂಟೆಬೆಟ್ಟು, ಒಳಗುಡ್ಡೆ ಪ್ರದೇಶದ ನೂರಾರು ಮನೆಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ಅರಿವು ಮೂಡಿಸಲು ಜನಜಾಗೃತಿ ಸಭೆ. ಸಮಯ: ಬೆಳಗ್ಗೆ 9ರಿಂದ ಅಪರಾಹ್ನ 12ರವರೆಗೆ. ಸ್ಥಳ: ಬಸ್ ನಿಲ್ದಾಣ, ಶಿವಪುರ ಪೇಟೆ, ಶಿವಪುರ ಕಾರ್ಕಳ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News