ಕಾನೆಕೆರೆಯಲ್ಲಿ ಬುರ್ದಾ ಮಜ್ಲಿಸ್

Update: 2016-01-01 18:40 GMT

ಉಳ್ಳಾಲ, ಜ.1: ತರ್ಬಿಯತುಲ್ ಇಸ್ಲಾಮ್ ಮದ್ರಸ ಕಾನೆಕೆರೆ, ಎಸ್ಸೆಸ್ಸೆಫ್ ಕಾನೆಕೆರೆ ಶಾಖೆಯ 20ನೆ ವರ್ಷಾಚರಣೆಯ ಪ್ರಯುಕ್ತ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಮದ್‌ಹುರ್ರಸೂಲ್ ಕಾರ್ಯಕ್ರಮ ಜ.2 ಹಾಗೂ 3ರಂದು ನಡೆಯಲಿದೆ. ಜ.2ರಂದು ಸಂಜೆ 5 ಗಂಟೆಗೆ ಮದ್ರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7ಕ್ಕೆ ಮೌಲಾನಾ ಕೆ.ಪಿ.ಹುಸೈನ್ ಸಅದಿ ಕೆ.ಸಿ ರೋಡ್‌ರಿಂದ ಮದ್‌ಹುರ್ರಸೂಲ್ ಪ್ರಭಾಷಣ ನಡೆಯಲಿದೆ. ಜ.3ರಂದು ಸಂಜೆ 4 ಗಂಟೆಗೆ ಎಸ್.ಬಿ.ಎಸ್. ವಿದ್ಯಾರ್ಥಿಗಳ ಕಾರ್ಯಕ್ರಮ, ರಾತ್ರಿ 7ಕ್ಕೆ ಬುರ್ದಾ ಮಜ್ಲಿಸ್ ನಡೆಯಲಿದೆ. ವಿ.ಯು.ಇಸ್ಹಾಕ್ ಝಹ್‌ರಿ ಉದ್ಬೋಧನೆ ನಡೆಸಲಿದ್ದಾರೆ. ಸೈಯದ್ ಶಿಹಾಬುದ್ದೀನ್ ತಂಙಳ್ ಅಲ್ ಮಶ್‌ಹೂರ್ ಪ್ರಾರ್ಥನೆಗೆ ನೇತೃತ್ವವನ್ನು ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News