ಕಡಬ, ಸುಬ್ರಹ್ಮಣ್ಯದಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ

Update: 2016-01-01 18:41 GMT

ಕಡಬ, ಜ.1: 94 ಸಿ ಹಕ್ಕು ಪತ್ರ ಮತ್ತು ವಿವಿಧ ಇಲಾಖೆಗಳ ಸರಕಾರಿ ಸೌಲಭ್ಯಗಳ ವಿತರಣಾ ಕಾರ್ಯಕ್ರಮವು ಕಡಬದ ಅನುಗ್ರಹ ಸಭಾಭವನದಲ್ಲಿ ಶುಕ್ರವಾರ ನಡೆಯಿತು.

 ಕಾರ್ಯಕ್ರಮವನ್ನು ಉದ್ಘಾಟಿಸಿದ ಅರಣ್ಯ ಸಚಿವ ಬಿ.ರಮಾನಾಥ ರೈ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಾಪ್ರಭಾ ಚಿಲ್ತಡ್ಕ, ಜಿಪಂ ಸದಸ್ಯರಾದ ದೇವರಾಜ್, ಕುಮಾರಿ ವಾಸುದೇವನ್, ತಾಪಂ ಸದಸ್ಯರಾದ ಮೀನಾಕ್ಷಿ, ಉಷಾ ಅಂಚನ್, ಕಡಬ ಗ್ರಾಪಂ ಅಧ್ಯಕ್ಷ ಬಾಬು ಮುಗೇರ, ತಾಲೂಕು ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಪಿ.ಪಿ. ವರ್ಗೀಸ್, ಕಾಂಗ್ರೆಸ್ ಮುಖಂಡ ಡಾ.ರಘು ಮತ್ತಿತರರು ಉಪಸ್ಥಿತರಿದ್ದರು. ಕಡಬ ವಿಶೇಷ ತಹಶೀಲ್ದಾರ ಲಿಂಗಯ್ಯ ಪ್ರಸ್ತಾವಣೆಗೈದರು. ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಎಸ್. ಸ್ವಾಗತಿಸಿದರು. ಕಡಬ ಭೂಮಾಪಕ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು.

ಸುಬ್ರಹ್ಮಣ್ಯ, ಜ.1: ಸುಳ್ಯದ ಕಂದಾಯ ಇಲಾಖೆ, ತಾಪಂ, ದ.ಕ. ಜಿಪಂ ಎಂಜಿನಿ ಯರಿಂಗ್ ಉಪವಿಭಾಗ ಹಾಗೂ ಕೊಲ್ಲಮೊಗ್ರು ಮತ್ತು ಸುಬ್ರಹ್ಮಣ್ಯ ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ 94 ಸಿ ಹಕ್ಕುಪತ್ರ ಹಾಗೂ ವಿವಿಧ ಇಲಾಖೆಯ ಸರಕಾರಿ ಸೌಲಭ್ಯ ವಿತರಣಾ ಕಾರ್ಯಕ್ರಮ ಶುಕ್ರವಾರ ಸುಬ್ರಹ್ಮಣ್ಯ ವಲ್ಲೀಶ ಸಭಾಭವನದಲ್ಲಿ ನಡೆಯಿತು.

ಅರಣ್ಯ ಸಚಿವ ಬಿ.ರಮಾನಾಥ ರೈ 187 ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಿದರು. ಕೃಷಿ ಇಲಾಖೆ ವತಿಯಿಂದ ಕೃಷಿಕರಿಗೆ ಯಂತ್ರೋಪಕರಣ, ಪವರ್ ಟ್ರಿಲ್ಲರ್ ಮುಂತಾದ ಕೃಷಿ ಚಟುವಟಿಕೆಯ ಯಂತ್ರೋಪಕರಣಗಳನ್ನು ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಲೀಲಾ ಮನಮೋಹನ್, ತಾಪಂ ಸದಸ್ಯೆ ತಾರಾ ಮಲ್ಲಾರ, ಸರಸ್ವತಿ ಕಾಮತ್, ನಿತ್ಯಾನಂದ ಮುಂಡೋಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News