ಬಂಟ್ವಾಳ: ನವೀಕೃತ ತಾಪಂ ಸಭಾಭವನ ಉದ್ಘಾಟನೆ

Update: 2016-01-01 18:43 GMT

ಬಂಟ್ವಾಳ, ಜ.1: ಅಧಿಕಾರಿಗಳಲ್ಲಿ ಅಭಿವೃದ್ಧಿಯ ಮನಸ್ಸಿದ್ದಾಗ ಮಾತ್ರ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಬಂಟ್ವಾಳ ತಾಲೂಕು ಪಂಚಾಯತ್‌ನ ನವೀಕೃತ ಸಭಾ ಭವನವನ್ನು ಶುಕ್ರವಾರ ಬೆಳಗ್ಗೆ ಉದ್ಘಾ ಟಿಸಿ ಮಾತನಾಡಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳ ಬಾಂಧವ್ಯ ಗಟ್ಟಿಯಾಗಿದ್ದಾಗ ಸಾಧನೆ ಮಾಡಬಹುದು ಎಂದ ಅವರು, ಸುಸಜ್ಜಿತ ಸಭಾಂಗಣಕ್ಕೆ ಶ್ರಮಿ ಸಿದ ಬಂಟ್ವಾಳ ತಾಪಂನ ಆಡಳಿತ ವರ್ಗವನ್ನು ಅಭಿನಂದಿಸಿದರು. ಮುಖ್ಯ ಅತಿಥಿಯಾಗಿದ್ದ ಸಂಸದ ನಳಿನ್‌ಕುಮಾರ್ ಕಟೀಲು ಮಾತ ನಾಡಿ, ಆಡಳಿತ ಮತ್ತು ಪ್ರತಿಪಕ್ಷ ಜೊತೆಯಾಗಿ ಕೆಲಸ ನಿರ್ವಹಿಸಿದಾಗ ಜನ ಮೆಚ್ಚುತ್ತಾರೆ. ಬಂಟ್ವಾಳ ತಾಲೂಕು ಪಂಚಾಯತ್‌ನಲ್ಲಿ ಇದು ಸಾಕಾರಗೊಂಡಿದೆ ಎಂದು ಅವರು ಶ್ಲಾಘಿಸಿದರು.
 ಇದೇ ವೇಳೆ ನವೆಂಬರ್‌ನಲ್ಲಿ ಆಯೋಜಿಸಲಾಗಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಮಾಣಿ ಜಿಪಂ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ತಾಪಂ ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಜಿಪಂ ಸದಸ್ಯರಾದ ಶೈಲಜಾ ಭಟ್, ಸಂತೋಷ್ ಕುಮಾರ್ ರೈ, ಮಮತಾ ಗಟ್ಟಿ, ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ನಳಿನಿ ಶೆಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಐಡಾ ಸುರೇಶ್, ತಾಪಂ ಉಪಾಧ್ಯಕ್ಷೆ ವಿಲಾಸಿನಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನವೀಕೃತ ಸಭಾಭವನದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಅಮ್ಮು ರೈ ಅವರನ್ನು ಇದೇ ಸಂದರ್ಭ ಸಚಿವ ರೈ ಸನ್ಮಾನಿಸಿದರು. ತಹಶೀಲ್ದಾರ್ ಪುರಂದರ ಹೆಗ್ಡೆ, ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಜಿ.ನರೇಂದ್ರ ಬಾಬು, ಯುವ ಜನ ಸೇವಾ ಕ್ರೀಡಾಧಿಕಾರಿ ನವೀನ್ ಪಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಸಿಡಿಪಿಒ ಗಳಾದ ಮಲ್ಲಿಕಾ, ಸುಧಾ ಜೋಶಿ ಮೊದಲಾದವರು ಉಪಸ್ಥಿತರಿದ್ದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ ಸ್ವಾಗತಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವ ಹಿಸಿದರು. ಗಿರೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News