ಜ.17, ಫೆ.21: ಪೋಲಿಯೊ ಲಸಿಕಾ ದಿನ

Update: 2016-01-01 18:45 GMT

ಮಂಗಳೂರು, ಜ.1: ಭಾರತ ಸರಕಾರದ ನಿರ್ದೇಶನ ದಂತೆ ಪೋಲಿಯೊ ನಿರ್ಮೂಲನೆ ಅಂಗವಾಗಿ ಜ.17 ಮತ್ತು ಫೆ.21ರಂದು ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದರು. ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಮೊದಲನೆ ದಿನ ಪೋಲಿಯೊ ಬೂತ್‌ಗಳಲ್ಲಿ ಹಾಗೂ ನಂತರದ 2ರಿಂದ 3 ದಿನ ಮನೆ ಭೇಟಿಯ ಮೂಲಕ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. 
ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮು ದಾಯ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳು ಸೇರಿದಂತೆ 921 ಲಸಿಕಾ ಕೇಂದ್ರ ಗಳಲ್ಲಿ 1,68,947 ಮಕ್ಕಳಿಗೆ ಪೋಲಿಯೊ ಹನಿ ನೀಡುವ ಗುರಿ ಹೊಂದಲಾಗಿದೆ ಎಂದರು. ವಲಸೆ ಬಂದಿರುವ ಕುಟುಂಬಗಳು ಹಾಗೂ ಕೊಳಚೆ ಪ್ರದೇಶಗಳು, ಲಸಿಕೆ ಬಿಟ್ಟು ಹೋದ ಪ್ರದೇಶಗಳು, ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದ ಪ್ರದೇಶಗಳು ಮತ್ತು ಆರೋಗ್ಯ ಕಾರ್ಯಕರ್ತರ ತೆರವಿನಿಂದ ಲಸಿಕಾ ಸೇವೆಗಳು ಕುಂಠಿತ ವಾಗಿರುವ ಪ್ರದೇಶ ಗಳನ್ನು ಪೂರ್ವಭಾವಿ ಸಮೀಕ್ಷೆಯ ಮೂಲಕ ಗುರುತಿಸಿ ಮೈಕ್ರೋಪ್ಲಾನ್‌ನಲ್ಲಿ ಬಿಟ್ಟುಹೋಗದಂತೆ ಸೇರಿಸಿಕೊಳ್ಳುವುದು ಹಾಗೂ ಗುರುತಿಸಲಾದ ಪ್ರದೇಶ ಗಳನ್ನು ಮೇಲ್ವಿಚಾರಕರ ಮೂಲಕ ಖಾತ್ರಿಗೊಳಿಸುವ ಕಾರ್ಯ ನಡೆಸಲಾಗಿದೆ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ.ಸಿಕಂದರ್ ಪಾಶಾ, ಡಾ.ಸತೀಶ್ಚಂದ್ರ, ಡಾ.ಅರುಣ್, ಡಾ.ರಾಜೇಶ್ ಉಪಸ್ಥಿತರಿದ್ದರು. ಇಂದ್ರಧನುಷ್ ಅಭಿಯಾನ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರಂಭಿಸಿರುವ ಇಂದ್ರಧನುಷ್ ಅಭಿಯಾನದಡಿ ಗರ್ಭಿಣಿ ಹಾಗೂ 2 ವರ್ಷದೊಳಗಿನ ಮಕ್ಕಳಿಗೆ ನೀಡುವ ನಾಲ್ಕನೆ ಸುತ್ತಿನ ಇಂದ್ರಧನುಷ್ ಲಸಿಕೆ ಹಾಕುವ ಕಾರ್ಯಕ್ರಮ ಜ.4ರಿಂದ 12ರವರೆಗೆ (7 ಹಾಗೂ 10 ಹೊರತುಪಡಿಸಿ) ನಡೆಯಲಿದೆ.
-ಡಾ.ರಾಮಕೃಷ್ಣ ರಾವ್, ದ.ಕ. ಡಿಎಚ್‌ಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News