ಕಾಸರಗೋಡು: ‘ಭೀಮ್ ರಥಯಾತ್ರೆ’ಗೆ ಚಾಲನೆ

Update: 2016-01-01 18:45 GMT

ಕಾಸರಗೋಡು, ಜ.1: ಭೂರಹಿತರಿಗೆ ಭೂಮಿ, ನಿರುದ್ಯೋಗಿಗಳಿಗೆ ಉದ್ಯೋಗ, ಖಾಸಗಿ ವಲಯದಲ್ಲಿ ಮೀಸಲಾತಿ, ಖಾಸಗಿ ಅನುದಾನಿತ ಶಿಕ್ಷಣ ವಲಯದಲ್ಲಿ ಮೀಸಲಾತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ನೌಕರಿ ಭಡ್ತಿಯಲ್ಲಿ ಮೀಸಲಾತಿ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಿಎಸ್ಪಿ ಪಕ್ಷದ ರಾಜ್ಯಮಟ್ಟದ ‘ಭೀಮ್ ರಥಯಾತ್ರೆ’ ಶುಕ್ರವಾರ ಸಂಜೆ ಕಾಸರಗೋಡಿನಿಂದ ಪ್ರಯಾಣ ಬೆಳೆಸಿತು.

ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ಬಿಎಸ್ಪಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಎಂ.ಗೋಪಿನಾಥ್ ಜಾಥಾ ನಾಯಕ, ಬಿಎಸ್ಪಿ ಕೇರಳ ರಾಜ್ಯಾಧ್ಯಕ್ಷ ಜೆ.ಸುಧಾಕರನ್‌ರಿಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ರಮೇಶ್ ನನ್ಮಂಡ, ಉಪಾಧ್ಯಕ್ಷ ಗಫೂರ್ ಪುದುಪ್ಪಾಡಿ, ಪ್ರಧಾನ ಕಾರ್ಯದರ್ಶಿ ಎ.ಪಿ.ಜಯಪ್ರಕಾಶ್, ಬಿ.ವಿನೋದ್, ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗುವ ಯಾತ್ರೆ ಜ.31ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News