ಗಣರಾಜ್ಯೋತ್ಸವ ಆಚರಣೆ 15 ನಿಮಿಷ ಕಡಿತ

Update: 2016-01-01 18:57 GMT

ಹೊಸದಿಲ್ಲಿ, ಜ. 1: ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆ ಅವಧಿಯಲ್ಲಿ ಕನಿಷ್ಠ 15 ನಿಮಿಷಗಳ ಕಡಿತ ಉಂಟಾಗಲಿದೆ. ಸುಮಾರು ಎರಡು ಗಂಟೆಗಳ ಪರೇಡನ್ನು 90 ನಿಮಿಷಗಳಿಗೆ ಇಳಿಸಲು ಸರಕಾರ ಉದ್ದೇಶಿಸಿದೆ. ಇದಕ್ಕಾಗಿ ಪಥಸಂಚಲನದಲ್ಲಿ ಭಾಗವಹಿಸುವ ಸೇನಾ ತುಕಡಿಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಗುವುದು ಹಾಗೂ ಸ್ತಬ್ಧಚಿತ್ರಗಳ ಸಂಖ್ಯೆಯನ್ನೂ ಇಳಿಸಲಾಗುವುದು.
ಪಥ ಸಂಚಲನ ಸಮಯವನ್ನು ಕಡಿತ ಮಾಡುವ ನಿರ್ಧಾರವನ್ನು ‘‘ಅತ್ಯುನ್ನತ’’ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿದ್ದಾಗ, ಪಥ ಸಂಚಲನ ಅವಧಿ ತೀರಾ ಅಧಿಕವಾಯಿತು ಎಂಬುದಾಗಿ ಭಾವಿಸಲಾಗಿತ್ತು.
ಆಚರಣೆ ಮುಕ್ತಾಯ ಗೊಳ್ಳುವ ಹಾಗೂ ತುಕಡಿಗಳು ಮರಳುವ ಸೂಚನೆಯನ್ನು ನೀಡುವ ‘ಬೀಟಿಂಗ್ ದ ರಿಟ್ರೀಟ್’ ರಾಗದಲ್ಲೂ ಬದಲಾವಣೆ ಮಾಡಿಲಾಗುವುದು ಹಾಗೂ ಸೇನಾ ರಾಗಗಳ ಜೊತೆಗೆ ಭಾರತೀಯ ಸಂಗೀತವನ್ನು ಮಿಳಿತಗೊಳಿಸಲಾಗುವುದು.
ಈ ಹಿಂದಿನ ಆಚರಣೆಗಳಿಗೆ ವ್ಯತಿರಿಕ್ತವಾಗಿ, ಎಲ್ಲ ಸ್ತಬ್ಧಚಿತ್ರಗಳು ಮತ್ತು ಸಂಗೀತ ಬ್ಯಾಂಡ್‌ಗಳನ್ನು ಹೆಚ್ಚಿನ ಜನರು ನೋಡಲು ಸಾಧ್ಯವಾಗುವಂತೆ ಮೂರು ದಿನಗಳ ಕಾಲ, ಅಂದರೆ ಜನವರಿ 29ರವರೆಗೆ ಕೆಂಪುಕೋಟೆಯಲ್ಲಿ ಪ್ರದರ್ಶಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News