×
Ad

ಭಟ್ಕಳ: ಗಲ್ಫ್ ನಲ್ಲಿ ಕೆಲಸಕೊಡಿಸುವುದಾಗಿ ವಂಚನೆ; ದೂರು

Update: 2016-01-02 09:44 IST

ಭಟ್ಕಳ: ಹೋರದೇಶದಲ್ಲಿ ಕೆಲಸ ಕೊಡಿಸುವದಾಗಿ ನಂಬಿಸಿ ಹಣ ಪಡೆದು ಕೆಲಸ ನೀಡದೆ ವಂಚಿಸಿದ್ದಾರೆ ಎಂದು ವ್ಯಕ್ತಿಯೊರ್ವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಮುರ್ಡೇಶ್ವರದ ಅಂತೋನಿ ಲೂಪಿಸ್ ನ್ಯಾಯಾಲಯದಲ್ಲಿ ದೂರು ನೀಡಿದ ವ್ಯಕ್ತಿ. ಆವರು ಉಮರ್ ಜಮಾಲ್, ಜಬಿವುಲ್ಲಾ, ಖಲಿಮುಲ್ಲಾ ಎಂಬವರ ವಿರುದ್ದ ದೂರು ನೀಡಿದ್ದಾರೆ. ಮಲೇಷಿಯಾದಲ್ಲಿನ ಮೈದಿನ ಸುಪರ್ ಮಾರ್ಕೇಟ್ ನಲ್ಲಿ ಕೆಲಸ ಕೊಡಿಸುವದಾಗಿ ಹುಡುಗರನ್ನು ಕಳುಹಿಸಿ ಎಂದು ಜಬಿವುಲ್ಲಾ ಮತ್ತು ಖಲಿಮುಲ್ಲಾ ಅವರ ಖಾತೆಗೆ ಅಂತೋನಿಯಿಂದ 25 ಸಾವಿರ ಮತ್ತು 35 ಸಾವಿರ ರೂ. ವನ್ನು ಖಾತೆಗೆ ಹಾಕಿಸಿಕೊಂಡಿದ್ದರು ಎಂದು ತಿಳಿಸಿದ್ದು, ಇಲ್ಲಿಂದ ಕಳುಹಿಸಿದ ಹುಡುಗರಿಗೆ ಸರಿಯಾದ ಕೆಲಸ ನೀಡದೆ ವಾಪಾಸ್ ಕಳುಹಿಸಿದ್ದು, ಅಲ್ಲದೆ ತನ್ನ ಮಾವನ ಮನೆಗೆ ಬಂದು ಮತ್ತಷ್ಟು ಹಣ ನೀಡದಿದ್ದರೆ ಹೆಂಡತಿ ಮಕ್ಕಳನ್ನು ಅಪಹರಿಸುವದಾಗಿ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಾಲಯದಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News