ಜ.8ರಿಂದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವ

Update: 2016-01-02 04:34 GMT


ಕಾಸರಗೋಡು :  ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವ  ಜನವರಿ ನಾಲ್ಕರಿಂದ ಎಂಟರ ತನಕ  ಕಾಸರಗೋಡು ಸರಕಾರಿ   ಹಯರ್  ಸೆಕಂಡರಿ ಶಾಲೆಯಲ್ಲಿ  ನಡೆಯಲಿದ್ದು , ಸಿದ್ದತೆ ಪೂರ್ಣಗೊಂಡಿದೆ ಎಂದು  ಸ್ವಾಗತ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು . ನಾಲ್ಕರಂದು   ವೇದಿಕೇತರ  ಹಾಗೂ ಐದರಂದು ವೇದಿಕೆ ಸ್ಪರ್ಧೆಗಳು  ನಡೆಯಲಿದೆ . 
ಎಂಟು ವೇದಿಕೆಗಳಲ್ಲಿ  ಸ್ಪರ್ಧೆ ನಡೆಯ ಲಿದ್ದು ,  ಪ್ರಾಥಮಿಕ , ಹೈಸ್ಕೂಲ್ , ಹಯರ್ ಸೆಕಂಡರಿ ವಿಭಾಗಗಳಲ್ಲಾಗಿ  ೨೯೮ ಸ್ಪರ್ಧೆಗಳು ನಡೆಯಲಿದ್ದು , 4426 ಸ್ಪರ್ಧಾಳುಗಳು ಪಾಲ್ಗೊಳ್ಳುವರು . 
ಬೆಳಿಗ್ಗೆ  9.30 ರಿಂದ  ಸಂಜೆ 7 ಗಂಟೆ ತನಕ ಸ್ಪರ್ಧೆ ನಡೆಯಲಿದೆ . 
ಕಲೋತ್ಸವ ವನ್ನು  ಜನವರಿ ನಾಲ್ಕರಂದು ಸಂಜೆ ನಾಲ್ಕು ಗಂಟೆಗೆ ಶಾಸಕ ಎನ್ . ಎ  ನೆಲ್ಲಿಕುನ್ನು  ಉದ್ಘಾಟಿಸುವರು. 


ಎಂಟರಂದು ನಡೆಯುವ ಸಮಾರೋಪ ಸಮಾರಂಭವನ್ನು ಸಂಸದ ಪಿ. ಕರುಣಾಕರನ್ ಉದ್ಘಾಟಿಸುವರು . ಸುದ್ದಿಗೋಷ್ಠಿಯಲ್ಲಿ   ನಗರಸಭಾ ಅಧ್ಯಕ್ಷೆ ಭೀಫಾತಿಮ್ಮ ಇಬ್ರಾಹಿಮ್ , ಪಾದೂರು ಕುನ್ಚಾಮು ಹಾಜಿ,ಮಿಶ್ರೀಯ ಹಮೀದ್, ಕೆ. ರತೀಶ್ , ಚಂದ್ರಕಲಾ  ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News