ಗಲ್ಫ್ ರಾಷ್ಟ್ರಗಳಲ್ಲಿ ಆರ್‌ಎಸ್‌ಎಸ್‌ನ್ನು ವಿಸ್ತರಿಸಲು ಉದ್ಯಮಿಗಳೊಂದಿಗೆ ಭಾಗವತ್ ಮಾತುಕತೆ

Update: 2016-01-02 06:31 GMT


  ಕೊಚ್ಚಿ, ಜ.2: ಆರ್‌ಆರ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗಲ್ಫ್ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಆರ್‌ಎಸ್‌ಎಸ್ ಶಾಖೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ.
   ಕೇರಳಕ್ಕೆ ಮೂರು ದಿನಗಳ ಭೇಟಿ ನೀಡಿದ್ದ ಭಾಗವತ್ ಅವರು  ಆಲುವದ ತಂತ್ರ ವಿದ್ಯಾ ಪೀಠಮ್‌ನಲ್ಲಿ ನಡೆದ ಸಭೆಯಲ್ಲಿ ಅನಿವಾಸಿ ಭಾರತೀಯ ಉದ್ಯಮಿಗಳು ಸೇರಿದಂತೆ ಪ್ರಮುಖ ನಾಯಕರೊಂದಿಗೆ ಚರ್ಚಿಸಿ, ಆರ್‌ಎಸ್‌ಎಸ್‌ನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಅವರಲ್ಲಿ ಸಹಕಾರ ಕೋರಿದ್ದಾರೆ.

   ಸಭೆಯಲ್ಲಿ ಯುಎಇ ಮೂಲದ ಎನ್‌ಎಂಸಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಬಿ.ಆರ್.ಶೆಟ್ಟಿ, ಯುಎಇ ಎಕ್ಸ್‌ಚೆಂಜ್‌ನ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಬೆಂಗಳೂರಿನ ಪ್ರಕೃತಿ ನೆಸ್ಟ್ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ ಎನ್.ಬಾಲಕೃಷ್ಣ, ದುಬೈನ ಜೆಆರ್ ಆ್ಯರೊಲಿಂಕ್‌ನ ಆಡಳಿತ ನಿರ್ದೇಶಕ  ಅನಿಲ್ ಪಿಳ್ಳೈ, ಯುಎಇ ಎಕ್ಸ್‌ಚೆಂಜ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ್, ಎನ್‌ಎಂಸಿ ಗ್ರೂಪ್‌ನ ಸಿಒಒ ಪ್ರಶಾಂತ್ ಮಾಂಗತ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News