ಗ್ಯಾಸ್ ಟ್ಯಾಂಕರ್ ಚಾಲಕರ ಮುಷ್ಕರ ಐದನೇ ದಿನಕ್ಕೆ: ದಕ್ಷಿಣ ಭಾರತಕ್ಕೆ ಅಡುಗೆ ಅನಿಲ ಪೂರೈಕೆ ಸ್ಥಗಿತ

Update: 2016-01-02 09:38 GMT

ಮಂಗಳೂರು: Mrpl, Hpcl ಅಡುಗೆ ಅನಿಲ ಸಾಗಾಟದ ಬುಲೆಟ್ ಟ್ಯಾಂಕರ್ ಚಾಲಕರ ಮುಷ್ಕರ ಐದನೇ ದಿನ ವನ್ನು ಪೂರೈಸಿದೆ.

ಆಂಧ್ರಪ್ರದೇಶದ ಹೆದ್ದಾರಿಯಲ್ಲಿ ಕರ್ತವ್ಯ ನಿರತರಾಗಿರುವಾಗಲೇ ದುಷ್ಕರ್ಮಿಗಳಿಂದ ಕೊಲೆಯಾದ ಶರವಣ್ ಹತ್ಯಾ ಆರೋಪಿಗಳನ್ನು ಬಂಧಿಸಬೇಕು. ತಮಗೆ ಭದ್ರತೆ ಒದಗಿಸಬೇಕು. ಮೃತ ಚಾಲಕನ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ಒದಗಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟ ಚಾಲಕರು Dyfi, citu ನೇತೃತ್ವಧಲ್ಲಿ ನಡೆಸುತ್ತಿರುವ ಮುಷ್ಕರ ಟ್ಯಾಂಕರ್ ಮಾಲಕರ ಸಂಘದ ಹಠಮಾರಿತನದಿಂದ ಪರಿಹಾರ ಕಾಣದೆ ಕಗ್ಗಂಟಾಗಿದೆ.

ಸುಮಾರು ನಾಲ್ಕು ಸಾವಿರ ಟ್ಯಾಂಕರುಗಳು Mrpl ಉತ್ಪಾದಿಸುವ ಅನಿಲವನ್ನು ದಕ್ಷಿಣ ಭಾರತದ ಮೂಲೆ ಮೂಲೆಗೆ ಸಾಗಿಸುತ್ತವೆ. ಆದರೆ ಈಗ ಏಕಕಾಲಕ್ಕೆ ಎಲ್ಲಾ ನಾಲ್ಕುಸಾವಿರ ಟ್ಯಾಂಕರ್ ಗಳು ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ದಕ್ಷಿಣ ಭಾರತದಾದ್ಯಂತ ಅನಿಲ ಪೂರೈಕೆ ಸ್ಥಗಿತಗೊಂಡಿದೆ. ಕೆಲವು ಕಡೆ ಅಡುಗೆ ಅನಿಲದ ಅಭಾವ ವರದಿಯಾಗಿದೆ. ಇನ್ನೂ ಒಂದೆರೆಡು ದಿನ ಮುಷ್ಕರ ಮುಂದುವರಿದರೆ ದಕ್ಷಿಣ ಭಾರತದಲ್ಲಿ ಅಡುಗೆ ಅನಿಲದ ತೀವ್ರ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ.

ಪೊಲೀಸ್ ಬಲದೊಂದಿಗೆ ಗ್ಯಾಸ್ ಚಾಲಕರ ಮುಷ್ಕರ ತಡೆಯಲು  ಮಾಲಕರ ಯತ್ನ, ಬದಲಿ ಡ್ರೈವರ್ ಮೂಲಕ ಹತ್ತು ಟ್ಯಾಂಕರ್ ಚಾಲನೆ. ತಡೆಯಲು ಯತ್ನಿಸಿದ ಮೂವತ್ತಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ. ಟೆಂಟ್ ಕಿತ್ತುಹಾಕಿ ಪೊಲೀಸರ ಗೂಂಡಾಗಿರಿ. ACP ಮದನ ಗಾಂವ್ಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು  ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳದಲ್ಲಿ ಹೆಚ್ಚಿನ  ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News