ತಲೆತಪ್ಪಿಸಿಕೊಂಡಿರುವ ಇಬ್ಬರು ಉಗ್ರರಿಗಾಗಿ ಶೋಧ

Update: 2016-01-02 08:19 GMT


ಪಂಜಾಬ್‌, ಜ.2: ಗುರುದಾಸ್‌ಪುರ ಜಿಲ್ಲೆಯ ಪಠಾಣ್ಕೋಟ್‌ನ ವಾಯುನೆಲೆಯಲ್ಲಿ ಅಡಗಿ ಕುಳಿತಿರುವ ಉಗ್ರರಿಗಾಗಿ ಎನ್‌ಎಸ್‌ಜಿ ಕಮಾಂಡೊಗಳಿಂದ ಕಾಯಾಚರಣೆ ಮುಂದುವರಿದಿದೆ.
ಒಟ್ಟು ಆರು ಮಂದಿ ಉಗ್ರರು ವಾಯುನೆಲೆ ಪ್ರವೇಶಿಸಿರುವ  ವಿವರ ಲಭ್ಯವಾಗಿದ್ದು, ಇವರ ಪೈಕಿ ನಾಲ್ವರನ್ನು ಸೇನಾ ಪಡೆ ಕೊಂದಿದೆ. ಇನ್ನು ಇಬ್ಬರು ಉಗ್ರರು ವಾಯುನೆಲೆಯಲ್ಲಿ ಅಡಗಿರುವ ಸಾಧ್ಯತೆ ಇದ್ದು, ಅವರಿಗಾಗಿ ಶೋಧ ಮುಂದುವರಿದೆ.
 . ಹೊಸ ವರ್ಷಾಚರಣೆಯ ವೇಳೆ ಪಾಕಿಸ್ತಾನದಿಂದ  ಉಗ್ರರು  ದೇಶದೊಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು  ಗುಪ್ತಚರ ಇಲಾಖೆಯು ತಿಳಿಸಿದ್ದರೂ ಭದ್ರತಾ ಪಡೆ ಕಟ್ಟೆಚ್ಚರ ವಹಿಸದೆ ಇರುವ ಕಾರಣದಿಂದಾಗಿ ಉಗ್ರರು ವಾಯುನೆಲೆ ಪ್ರವೇಶಿಸಿದ್ದಾರೆ. ಇದೇ ವೇಳೆ ಭಾರತ ಮೂವರು ಯೋಧರನ್ನು ಕಳೆದುಕೊಂಡಿದೆ
ಡಿ 30ರಂದು ಉಗ್ರರು ದೇಶದೊಳ್ಕ್ಕೆ ನುಗ್ಗಿದ್ದರು. ಹೊಸವರ್ಷದ ಮುನ್ನಾದಿನವಾದ ಗುರುವಾರ ಉಗ್ರರು ಗುರುದಾಸಪುರದ ಪೊಲೀಸ್‌ ವರಿಷ್ಠಾಧಿಕಾರಿ ಸಲ್ವಿಂದರ್‌ ಸಿಂಗ್‌ನನ್ನು  ಅಪಹರಿಸಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಿದ್ದರೂ. ಅವರ  ಬಳಿಯಿದ್ದ ಕಾರು ಹಾಗೂ ಗನ್"ನ್ನು ಕಿತ್ತುಕೊಂಡಿದ್ದರು. ಬಳಿಕ ಭದ್ರತಾ ಪಡೆ ಉಗ್ರರಿಗಾಗಿ ಶೋಧ ಆರಂಭಿಸಿತ್ತು. 24 ಗಂಟೆಯಾದರೂ ಉಗ್ರರ ಸುಳಿವು ಭದ್ರತಾ ಪಡೆಗೆ, ಪೊಲೀಸರಿಗೆ ಸಿಗಲಿಲ್ಲ. ಉಗ್ರರು  ವಾಯುನೆಲೆ ಪ್ರವೇಶಿಸುವ ತನಕವೂ ಭದ್ರತಾ ಪಡೆಗೆ ಗೊತ್ತಾಗಲಿಲ್ಲ. ಪಾಕಿಸ್ತಾನದಲ್ಲಿದ್ದ ತಮ್ಮ ತಂಡದೊಂದಿಗೆ ದೂರವಾಣಿ ಮೂಲಕ ಮಾತುಕತೆ ಬಳಿಕ ದಾಳಿ  ನಡೆಸಿದ  ಉಗ್ರರು ವಾಯುನೆಲೆ ಮತ್ತು ಫೈಟರ್‌ ಜೆಟ್‌ನ್ನು ಸ್ಫೋಟಿಸುವ ಯೋಜನೆ ರೂಪಿಸಿದ್ದರು. ಆದರೆ ಸೇನಾ ಯೋಧರು  ಅವರ ಪ್ರಯತ್ನವನ್ನು ವಿಫಲಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News