ಹೊತ್ತಿ ಉರಿಯುತ್ತಿರುವ ಹೋಟೆಲ್ ಎದುರು ಸೆಲ್ಫಿ ತೆಗೆದು ಆಕ್ರೋಶಕ್ಕೆ ತುತ್ತಾದ ಜೋಡಿ

Update: 2016-01-05 10:23 GMT

ರೋಮ್ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸಿದ ಎಂಬ ನಾಣ್ಣುಡಿಯಂತೆ , ದುಬೈ ನ ಹೋಟೆಲ್ ದಿ ಅಡ್ರೆಸ್ ಹೊತ್ತಿ ಉರಿಯುತ್ತಿರುವಾಗ ಅದರ ಜೊತೆ ಸೆಲ್ಫಿ ತೆಗೆದು ಹೊಸ ವರ್ಷದ ಶುಭಾಶಯ ಕೋರಿದ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿ ಮಂಗಳಾರತಿ ಆಗಿದೆ. 
ಹೊಸ ವರ್ಷಕ್ಕೆ ಇನ್ನೂ ಮೂರ್ನಾಲ್ಕು ಗಂಟೆಗಲಿರುವಾಗ ದುಬೈ ಯಾ ಬುರ್ಜ್ ಖಲೀಫಾ ಕಟ್ಟಡದ ಸಮೀಪದ ಖ್ಯಾತ ಹೋಟೆಲ್ ದಿ ಅಡ್ರೆಸ್ ಗೆ ಬೆಂಕಿ ತಗುಲಿದೆ. ಇದನ್ನು ಸಾಕಷ್ಟು ಜನ ಫೋಟೋ ತೆಗೆದು ದುಬೈ ಫೈರ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಆದರೆ ಇಂತಹ ಸಂದರ್ಭದಲ್ಲಿ ಇರಬೇಕಾದ ಸಂಯಮ ಹಾಗು ಕಾಳಜಿ ತೋರದ ಈ ಜೋಡಿ ಅದೇ ಕಟ್ಟಡದ ಹಿನ್ನೆಲೆ ಇಟ್ಟುಕೊಂಡು ಸೆಲ್ಫಿ ತೆಗೆದು ಇನ್ಸ್ಟಾ ಗ್ರಾಂ ನಲ್ಲಿ "Happy New Year My dear Dubai. May God bless you and keep you safe, you always surprise us with the biggest fireworks." ಎಂದು ಹಾಕಿದ್ದಾರೆ. 
ಇದಕ್ಕೆ ಕೂಡಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅತ್ಯಂತ ಸೂಕ್ತವಲ್ಲದ ಹಾಗು ಸ್ಟುಪಿಡ್ ಸೆಲ್ಫಿ ಇದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಗೆ ಜನ ಟೀಕೆಗಳ ಸುರಿಮಳೆ ಗೈದಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News