ಕರ್ನಾಟಕ ಸಮಾಜ ಸುಧಾರಕರ ಜನ್ಮ ಭೂಮಿ: ಮೋದಿ

Update: 2016-01-02 14:42 GMT

 
ಮೈಸೂರಿನಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮಿ ಜನ್ಮಶತಮಾನೋತ್ಸವ  ಸಮಾರಂಭದಲ್ಲಿ ಪ್ರಧಾನಿ ಶ್ಲಾಘನೆ
ಮೈಸೂರು, ಜ.2: ಕರ್ನಾಟಕ ಸಮಾಜ ಸುಧಾರಕರ ಜನ್ಮ ಭೂಮಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
    ಮೈಸೂರು ಮಹರಾಜ ಕಾಲೇಜು ಮೈದಾನದಲ್ಲಿ ಇಂದು ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮಿ ಜನ್ಮಶತಮಾನೋತ್ಸವ   ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ನಮ್ಮ ದೇಶದ ಸಂತರು ಆರೋಗ್ಯವಂತ ಸಮಾಜ ಕಟ್ಟಿದ್ದಾರೆ. ಮಠಗಳು, ಸಂತರು ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ದೇಶದಲ್ಲಿ ಸಂತರು ದೊಡ್ಡ ಕ್ರಾಂತಿ ಮಾಡಿದ್ಧಾರೆ , ದುಷ್ಟರ ವಿರೋಧದ ನಡುವೆಯೂ ಸಮಾಜ ಕಟ್ಟಿದ್ದಾರೆ.ೆ ಎಂದು ಅಭಿಪ್ರಾಯಪಟ್ಟರು.
         
   ಬಂಧು ಭಗಿನಿಯರೇ ನಿಮಗೆ ನನ್ನ ನಮಸ್ಕಾರ. ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ನನ್ನ ಭಾಷಣದ ಕನ್ನಡ ಅನುವಾದ ಬೇಕಾಗಿಲ್ಲ ಅನಿಸುತ್ತಿದೆ. ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದೀರಿ, ಶ್ರೀಗಳು ಇದ್ದಾರೆ. ಕೆಲವು ದಿನಗಳ ಹಿಂದೆ  ಲಂಡನ್‌ಗೆ ಹೋಗಿದ್ದೇ. ಅಲ್ಲಿ ಮಹಾತ್ಮ ಬಸವೇಶ್ವರ ಪ್ರತಿಮೆ ಅನಾವರಣ ಮಾಡಿದೆ. ಸಮಾನತೆ ,ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನನವರ ವಿಚಾರಧಾರೆ ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಅಪೂರ್ವ ಸಾಧಕರು ಹುಟ್ಟಿದ ಊರಿಗೆ ಬಂದಿದ್ದೇನೆ. ಅದೇ ಪರಂಪರೆಯ ಗಣ್ಯರೊಂದಿಗೆ ನಾನಿದ್ದೇನೆ. ಅವರಿಗೆ ನಮಿಸಲು ಬಂದಿದ್ದೇನೆ.ಶಿವರಾತ್ರಿ ಸ್ವಾಮೀಜಿ ಮಹಾನ್ ಸುಧಾರಕರು ಎಂದರು.
 ಯೋಧರನ್ನು ಅಭಿನಂದಿಸಿದ ಪ್ರಧಾನಿ ಮೋದಿ: ಪಠಾಣ್‌ಕೋಟೆಯ ಉಗ್ರರ ದಾಳಿಯ ಬಗ್ಗೆ ಪ್ರಸ್ತಾಪಿಸಿದ ಮೋದಿ ನಮ್ಮ ದೇಶದ ಸಿಪಾಯಿಗಳ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ಪಾಕ್‌ನ ಉಗ್ರರಿಗೆ ದಿಟ್ಟ ಉತ್ತರ ನೀಡಿದ್ದಾರೆ. ಅವರ ಪರಿಶ್ರಮದಿಂದ ನೆಮ್ಮದಿಯಾಗಿ ನಾವಿದ್ದೇವೆ. ಅವರಿಗೆ ದೇಶದ ಪರವಾಗಿ ಅಭಿನಂದನೆಗಳು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News