ಮೋದಿ ,,, ಮೋದಿ,, ಎನ್ನುತ್ತಾ ಕಾರಿಗೆ ಅಡ್ಡ ಬಂದ ಯುವಕ

Update: 2016-01-02 18:13 GMT


 ಮೈಸೂರು, ಜ.2: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಚರಿಸುತ್ತಿದ್ದ ವಾಹನಕ್ಕೆ ಯುವಕನೊಬ್ಬ ಅಡ್ಡ ಬಂದ ಪರಿಣಾಮವಾಗಿ ನಗರದಲ್ಲಿ ಸ್ವಲ್ಪ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.
 ಮೈಸೂರು ಮಹರಾಜ ಕಾಲೇಜು ಮೈದಾನದಲ್ಲಿ ಇಂದು ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮಿ ಜನ್ಮ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಯುವಕನೊಬ್ಬ ಪ್ರಧಾನಿ ಪ್ರಯಾಣಿಸುತ್ತಿದ್ದ ವಾಹನಕ್ಕೆ ಮೋದಿ .. ಮೋದಿ ಎನ್ನುತ್ತಾ ್ತ ಅಡ್ಡ ಬಂದ ಎನ್ನಲಾಗಿದೆ. ತಕ್ಷಣ ಆತನನ್ನು ಎಸ್‌ಜಿಪಿ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
 ಪೊಲೀಸರು ಈತನನ್ನು ವಿಚಾರಿಸಿದಾಗ ಆತ ಮೋದಿ ಮೇಲಿನ ಅಭಿಮಾನದಿಂದ ಮೋದಿ ಎನ್ನುತ್ತಾ ಬಂದಿದ್ದ. ಬೆದರಿಕೆ ಉದ್ದೇಶ ಅವನಿಗೆ ಇರಲಿಲ್ಲ. ಈ ಕಾರಣದಿಂದಾಗಿ ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕಳಹಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News