ಅಯ್ಯನಕಟ್ಟೆಯಲ್ಲಿ ನೂತನ ಸಮುದಾಯ ಭವನ ಲೋಕಾರ್ಪಣೆ: ಅಧಿಕಾರಿಗಳು ಕ್ರಿಯಾಶೀಲರಾದರೆ ಅಭಿವೃದ್ಧಿ ಸಾಧ್ಯ: ಸಚಿವ ಬಿ.ರಮಾನಾಥ

Update: 2016-01-02 17:43 GMT

ಸುಳ್ಯ, ಜ.2: ಜಿಪಂಗೆೆ ಬಂದ ಸ್ವಚ್ಛ ಪ್ರಶಸ್ತಿ ಮೊತ್ತ 36 ಲಕ್ಷ ರೂ. ವೆಚ್ಚದಲ್ಲಿ ಕಳಂಜ ಗ್ರಾಮದ ಅಯ್ಯನಕಟ್ಟೆ ಎಂಬಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಮುದಾಯ ಭವನ ವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅಧಿಕಾರಿಗಳು ಕ್ರಿಯಾಶೀಲರಾಗಿದ್ದಾಗ ಮಾತ್ರ ಕಾಮಗಾರಿಗಳು ಅನುಷ್ಠಾನ ಆಗುತ್ತವೆ. ಸೋಮಾರಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಅಗತ್ಯವಿದೆ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಪ್ರಶಸ್ತಿ ಮೊತ್ತವನ್ನು ಹಂಚಿಕೊಳ್ಳದೆ ಆದಾಯ ಬರುವ ವ್ಯವಸ್ಥೆಗೆ ಬಳಕೆ ಮಾಡುವ ಮತ್ತು ಗ್ರಾಮಾಭಿವೃದ್ಧಿಗೆ ಆದ್ಯತೆ ನೀಡುವ ದೃಷ್ಠಿಯಿಂದ ಕಳಂಜ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲು ಎಲ್ಲಾ ಸದಸ್ಯರ ಅನುಮತಿಯೊಂದಿಗೆ ನೀಡ ಲಾಯಿತು ಎಂದು ಹೇಳಿದರು.
ಕಟ್ಟಡ ಗುತ್ತಿಗೆದಾರ ಕರುಣಾಕರ ರೈ ಹಾಗೂ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪರನ್ನು ಸನ್ಮಾನಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಪಂ ಸದಸ್ಯರಾದ ಸರಸ್ವತಿ ಕಾಮತ್, ಬಾಲಕೃಷ್ಣ ಬಾಣಜಾಲು, ತಾಪಂ ಸದಸ್ಯ ಹರೀಶ್ ರೈ ದೇರಂಪಾಲು, ಕಳಂಜ ಗ್ರಾಪಂ ಅಧ್ಯಕ್ಷೆ ಯಶೋದಾ, ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ರವಿ ಅತಿಥಿಗಳಾಗಿದ್ದರು. ಪಿಡಿಒ ಎ.ರವಿಚಂದ್ರ ಸ್ವಾಗತಿಸಿದರು. ಉಪಾಧ್ಯಕ್ಷ ರವಿ ಪ್ರಸಾದ್ ರೈ ವಂದಿಸಿದರು. ಜಿಪಂ ಉಪ ಕಾರ್ಯದರ್ಶಿ ಎನ್.ಆರ್.ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒಗಳಾದ ಚಂದ್ರಾವತಿ ಹಾಗೂ ಚೆನ್ನಪ್ಪಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News