ದುಬೈ: ಶುಗರ್ ಫ್ರೀ ಕಾಫಿಶಾಪ್‌ಗೆ ಚಾಲನೆ

Update: 2016-01-02 17:46 GMT

ದುಬೈ ಜ.2: ತುಂಬೆ ಸಮೂಹ ಸಂಸ್ಥೆಯ ‘ಶುಗರ್ ಫ್ರೀ ಕೇಕ್ಸ್ ಬ್ಲೆಂಡ್ಸ್ ಆ್ಯಂಡ್ ಬ್ರೀವ್ಸ್ ಕಾಫಿ ಶಾಪ್’ಗೆ ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಸುರೇಶ್ ರೈನಾ ಗುರುವಾರ ಚಾಲನೆ ನೀಡಿದರು.
ಬಳಿಕ ಅವರು ಸಂದರ್ಶಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.
 ಈ ಸಂದರ್ಭ ಮಾತನಾಡಿದ ತುಂಬೆ ಸಮೂಹ ಸಂಸ್ಥೆಯ ಹಾಸ್ಪಿಟಾಲಿಟಿ ವಿಭಾ ಗದ ನಿರ್ದೇಶಕ ಫರ್ಹಾದ್ ಸಿ. ‘ನಮ್ಮ ಸಂಸ್ಥೆಯಿಂದ ಶುಗರ್ ಫ್ರೀ ಕೇಕ್‌ಗಳನ್ನು ಗ್ರಾಹಕರಿಗೆ ನೀಡಲು ಹರ್ಷಿಸುತ್ತೇವೆ. ಮುಂದೆಯೂ ಈ ರೀತಿಯ ಶುಗರ್ ಫ್ರೀ ಕೇಕ್‌ಗಳನ್ನು ಹಾಗೂ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಂಸ್ಥೆಯ ಮಳಿಗೆಗಳ ಮೂಲಕ ಗ್ರಾಹಕರಿಗೆ ನೀಡಲು ಪ್ರಯತ್ನಿಸುವೆವು’ ಎಂದು ಹೇಳಿದರು.
ತುಂಬೆ ಸಮೂಹ ಸಂಸ್ಥೆಯಿಂದ ಯುಎ ಇಯಲ್ಲಿ ಆರಂಭಗೊಂಡ ಬ್ಲೆಂಡ್ಸ್ ಆ್ಯಂಡ್ ಬ್ರೀವ್ಸ್ ಕಾಫಿ ಶಾಪ್ ಮಳಿಗೆಗಳು ಭಾರತದಾದ್ಯಂತ ವ್ಯಾಪಿಸಿದ್ದು, ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.ಮುಂದಿನ 6-7 ವರ್ಷಗಳಲ್ಲಿ ಯುಎಇಯಲ್ಲಿ 100 ಔಟ್‌ಲೆಟ್‌ಗಳಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ. ಭಾರತ ಹಾಗೂ ಮಧ್ಯ ಪ್ರಾಚ್ಯದ ಇತರ ಕಡೆಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಟನೆೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News